ವೈದ್ಯಕೀಯ ವಿದ್ಯಾರ್ಥಿನಿಯ ಶೌಚಾಲಯದಲ್ಲಿ ಗುಪ್ತ ಕ್ಯಾಮರಾವನ್ನು ಅಳವಡಿಸಿದ ಆರೋಪದ ಮೇಲೆ ನ್ಯೂರೋಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದ ವೈದ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.

ಜಗನ್ನಾಥ್ ಕಲಸ್ಕರ್ ಎಂಬಾತನೇ ಬಂಧಿತ ವ್ಯಕ್ತಿ .ಆತ ಮಹಿಳಾ ಶೌಚಾಲಯದಲ್ಲಿ ಮಾತ್ರವಲ್ಲದೆ ವೈದ್ಯಕೀಯ ವಿದ್ಯಾರ್ಥಿನಿಯ ಮಲಗುವ ಕೋಣೆಯಲ್ಲಿಯೂ ಗುಪ್ತ ಕ್ಯಾಮೆರಾವನ್ನು ಇರಿಸಿದ್ದ ಎಂದು ತಿಳಿದುಬಂದಿದೆ . ಕಳೆದವಾರ ವೈದ್ಯಕೀಯ ವಿದ್ಯಾರ್ಥಿನಿಯ ಕೊಠಡಿಯಲ್ಲಿ ವಿದ್ಯುತ್ ಬಲ್ಬ್ ಉರಿಯುತ್ತಿರಲಿಲ್ಲ ಹೀಗಾಗಿ ರಿಪೇರಿಯನ್ನು ಕರೆಸಿದ್ದರು ತಪಾಸಣೆ ಸಂದರ್ಭ ಬಲ್ಬ್ ನೊಳಗೆ ಚಿಕ್ಕ ಗುಪ್ತ ಕ್ಯಾಮರಾವನ್ನು ಅಳವಡಿಸಿರುವುದು ಆತ ಪತ್ತೆಹಚ್ಚಿ ಗಮನಕ್ಕೆ ತಂದಿದ್ದ . ಆಕೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು.
Leave a Comment