ಮುಂಬೈ ;
ಭಾರತದಲ್ಲಿ ಹೊಸ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸ ದಂತೆ ಮಾಸ್ಟರ್ ಕಾರ್ಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ವಿಧಿಸಿದೆ .
ಜುಲೈ22 ರಿಂದ ನಿಷೇಧ ಜಾರಿಯಾಗಲಿದ್ದು , ಹಾಲಿ ಬಳಕೆದಾರರಿಗೆ ಅನ್ವಯ ಸುವುದಿಲ್ಲ. ಮಾಸ್ಟರ್ ಕಾರ್ಡ್ ಹಣಪಾವತಿ ಡೇಟಾ ವ್ಯವಸ್ಥೆಗೆ ಸಂಬಂಧಿಸಿದ ಆರ್ ಬಿ ಐ ನಿಯಮಾವಳಿಗಳನ್ನು ಪದೇ ಪದೇ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.

ಈ ನಿರ್ದೇಶನ ಪಾಲಿಸಲು ಮಾಸ್ಟರ್ ಕಾರ್ಡ್ ನ ಕಾರ್ಡ್ಗಳನ್ನು ವಿತರಿಸುವ ಎಲ್ಲಾ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸೂಚಿಸಲು ಮಾಸ್ಟರ್ ಕಾರ್ಡ್ ಸಂಸ್ಥೆಗೆ ತಿಳಿಸಲಾಗಿದೆ. ಆರ್ ಬಿ ಐ ಹಿಂದೆ 2018ರ ಏಪ್ರಿಲ್ನಲ್ಲಿ ಕ್ರೆಡಿಟ್ ಡೆಬಿಟ್ ಕಾರ್ಡಗಳನ್ನು ವಿತರಿಸುವ ಎಲ್ಲಾ ಸಂಸ್ಥೆಗಳಿಗೆ ಭಾರತದಲ್ಲಿ ನಡೆಸುತ್ತಿರುವ ಹಣಕಾಸು ವರ್ಗಾವಣೆ ವ್ಯವಸ್ಥೆ ಗಳ ಎಲ್ಲಾ ವಿವರಗಳನ್ನು ಸಲ್ಲಿಸುವಂತೆ ತಿಳಿಸಿತ್ತು.
ಇದಕ್ಕಾಗಿ 6 ತಿಂಗಳ ಗಡುವನ್ನು ನೀಡಿತ್ತು. ಕಂಪನಿಗಳು ತಮ್ಮ ಎಲ್ಲಾ ಡೇಟಾಗಳನ್ನು ಭಾರತದಲ್ಲಿಯೇ ಸ್ಟೋರ್ ಮಾಡಬೇಕು. ಎಂದು ಸೂಚಿಸಿತ್ತು. ಹೀಗಿದ್ದರೂ ಮಾಸ್ಟರ್ ಕಾರ್ಡ್ ಈ ನಿರ್ದೇಶನವನ್ನು ಪಾಲಿಸಲಿಲ್ಲ ಎಂದು ಆರ್ ಬಿ ಐ ತಿಳಿಸಿದೆ.
ಏನಿದು ಮಾಸ್ಟರ್ ಕಾರ್ಡ್? ಅಮೆರಿಕ ಮೂಲದ ಹಣಕಾಸು ಸೇವಾ ವಲಯದ ಕಂಪನಿ ಮಾಸ್ಟರ್ ಕಾರ್ಡ್ ನಾನಾ ರಾಷ್ಟ್ರಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಮಾರಾಟಮಾಡುತ್ತದೆ. ಬ್ಯಾಂಕುಗಳು ಮತ್ತು ಗ್ರಾಹಕರ ನಡುವಣ ಹಣಕಾಸು ವರ್ಗಾವಣೆಗಳನ್ನು ಕಾರ್ಡ್ ಗಳ ಮೂಲಕ ನೆರವೇರಿಸಲು ತನ್ನ ಸೇವೆ ಒದಗಿಸುತ್ತದೆ.
ಭಾರತದಲ್ಲಿ ಪೇಮೆಂಟ್ ಮತ್ತು ಸೆಟ್ಲಮೆಂಟ್ ವ್ಯವಸ್ಥೆಯ ಕಾಯಿದೆ 2007 ಅಡಿಯಲ್ಲಿ ಕಂಪನಿ ಕಾರ್ಯ ನಿರ್ವಹಿಸುತ್ತಿತ್ತು. ಭಾರತದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ರುಪೇ ಕಾರ್ಡನ್ನು 2014ರಲ್ಲಿ ಬಿಡುಗಡೆಗೊಳಿಸಿತ್ತು. ಇದು ಭಾರತದ ಸ್ವದೇಶಿ ಪೇಮೆಂಟ್ ಕಾರ್ಡ್ ಆಗಿದೆ. ರುಪೇ ಕ್ರೆಡಿಟ್ & ಡೆಬಿಟ್ ಕಾರ್ಡ ಗಳು ಲಭ್ಯವಿದೆ. ಎಟಿಎಂ ನಿಂದ ನಗದು ತೆಗೆಯಲು, ಪಿ ಒ ಎಸ್ ಮೂಲ ಶಾಪಿಂಗ್ ಮಾಡಲು ಆನ್ಲೈನ್ ಖರೀದಿಗೆ ರುಪೆ ಕಾರ್ಡ್ ಬಳಸಬಹುದು.
Leave a Comment