ಕಾಬುಲ್; (ಪಿಟಿಐ);
ಅಫ್ಘಾನ್ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಸ್ಥಿತಿ-ಗತಿ ಕುರಿತು ವರದಿ ಮಾಡಲು ಅಫ್ಘಾನಿಸ್ತಾನಕ್ಕೆ ತೆರಳಿದ ಭಾರತದ ಮೂಲದ ಫೋಟೋ ಜರ್ನಲಿಸ್ಟ್ ಡ್ಯಾನಿಷ್ ಸಿದ್ದಕಿ (40) ಗುರುವಾರ ರಾತ್ರಿ ಹತ್ಯೆಯಾಗಿದ್ದಾರೆ. ಮುಂಬೈ ನವರಾದ ಸಿದ್ದಕಿ ರಾಯಿಟಸ್ ೯ ಸುದ್ದಿಸಂಸ್ಥೆಯ ಉದ್ಯೋಗಿಯಾಗಿದ್ದರು.
ಅವರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೂ ಭಾಜನರಾಗಿದ್ದರು. ಕಂದಹಾರನ ಸ್ಪಿನ್ ಬೋಲ್ಡ್ ಕ್ ಜಿಲ್ಲೆಯಲ್ಲಿ ಅಫ್ಘಾನ್ ಸೇನೆ ಮತ್ತು ತಾಲಿಬಾನಿಗಳ ನಡುವೆ ಭೀಕರ ಕದನ ದೃಶ್ಯವನ್ನು ಸೆರೆಹಿಡಿಯಲು ಅವರು ತೆರಳಿದ್ದರು ಎಂದು ಮೂಲಗಳು ಉಲ್ಲೇಖಿಸಿ ಟೊಲೊ ನ್ಯೂಸ್ ವರದಿ ಮಾಡಿದೆ.

ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡ್ ಕ್ ಜಿಲ್ಲೆಯನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಅಫ್ಘಾನ್ ಸೇನೆ ಮತ್ತು ತಾಲಿಬಾನಿಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಯುದ್ಧಪೀಡಿತ ಕಂದಹಾರ ನ ಪರಿಸ್ಥಿತಿ ಕುರಿತು ವರದಿ ಮಾಡಲು ಅವರು ತೆರಳಿದ್ದರು.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ ಡ್ಯಾನಿಷ್ ಅವರು 2007 ರಲ್ಲಿ ಜಾಮಿಯಾದ ಎಜೆಕೆ ಸಮೂಹ ಸಂವಹನ ಸಂಶೋಧನಾ ಕೇಂದ್ರದಿಂದ ಸಮೂಹ ಸಂವಹನ ವಿಷಯದಲ್ಲೂ ಪದವಿ ಪಡೆದಿದ್ದರು. ಟಿವಿ ವಾಹನಿ ವರದಿಗಾರರಾಗಿ ವೃತ್ತಿಜೀವನ ಆರಂಭಿಸಿದ ಸಿದ್ದಕಿ ನಂತರ ಫೋಟೋ ಜರ್ನಲಿಸ್ಟ ಆಗಿ ವೃತ್ತಿಯನ್ನು ಬದಲಿಸಿದ್ದರು.2010 ರಲ್ಲಿ ರಾಯಿಟಸ್ ೯ ಸುದ್ದಿಸಂಸ್ಥೆಗೆ ಇಂಟನಿ ೯ ಯಾಗಿ ಸೇರಿದವರು ನಂತರ ಅದೇ ಸಂಸ್ಥೆಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು.
Leave a Comment