ಮುಂಬೈ : ಬಾಲಿವುಡ್ ನಟಿ ಶಲ್ಪಾ ಶೆಟ್ಟಿಯವರ ಪತಿ. ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳನ್ನು ತಯಾರಿಸಿ ಕೆಲವೊಂದು ಆಪ್‍ಗಳ ಮೂಲಕ ವಿತರಿಸುತ್ತಿದ್ದ ಆರೋಪದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಕುಂದ್ರಾ ಅವರೇ ಪ್ರಮುಖ ಸಂಚುಕೋರರು. ಇವರ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ಮುಂಬಯಿ ಪೊಲೀಸ್ ಕಮಿಷನರ್ ಹೇಳಿದ್ದಾರೆ. ಬ್ರಿಟಿಷ – ಭಾರತೀಯ ಮೂಲದ ಉದ್ಯಮಿಯಾಗಿರುವ ಕುಂದ್ರಾ ವಿರುದ್ಧ ಕಳೆದ ವರ್ಷದ ಫೆಬ್ರವರಿಯಲ್ಲೇ ದೂರು ಬಂದಿದು ಈ ಬಗ್ಗೆ ಮುಂಬಯಿ ಅಪರಾಧ ತಡೆ ವಿಭಾಗದ ಪೋಲೀಸರು ತನಿಖೆ ಸಡೆಸುತ್ತಿದ್ದಾರೆ. ನಟಿ ಪೂನಂ ಪಾಂಡೆ ಹೇಳುವಂತೆ ಅಶ್ಲೀಲ ಚಿತ್ರ ತಯಾರಿಸಲು ನಟಿಯರನ್ನು ಬಲವಂತವಾಗಿ ನಗ್ನಗೊಳಿಸಲಾಗುತ್ತಿತ್ತಂತೆ. ಈ ಸಂಬಂಧ ಕಳೆದ ವಾರ ಒಂಭತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ.
Leave a Comment