ಭಟ್ಕಳ: ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೋರ್ವರಿಗೆ ಚಾಕುವಿನಿಂದ ಇರಿದು ಗಾಯಪಡಿಸಿದ್ದಲ್ಲದೇ, ಜಾತಿ ಹೆಸಸರು ಹೇಳಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿರುವ ಬಗ್ಗೆ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆರೋಪಿಗಳನ್ನು ತಾಲೂಕಿನ ಹೆಬಳೆ ಗಾಂಧಿನಗರದ ಜಗದೀಶ ವಾಸು ಮೊಗೇರ ಹಾಗೂ ಇಲ್ಲಿನ ಹುರುಳಿಸಾಲ ನಿವಾಸಿ ಈಶ್ವರ ಸಣ್ಣತಮ್ಮ ರಾಮಾ ನಾಯ್ಕ ಎಂದು ಗುರುತಿಸಲಾಗಿದೆ. ಆರೋಪಿಗಳು ದಿನೇಶ ಗೊಂಡ ಹಾಗೂ ಮಾದೇವ ಗೊಂಡ ಎಂಬ ಇಬ್ಬರು ವ್ಯಕ್ತಿಗಳಿಗೆ ಹೊಡೆದಿದ್ದಲ್ಲದೇ, ದಿನೇಶ ರಾಮಾ ಗೊಂಡನ ಬೆನ್ನಿಗೆ ಆರೋಪಿ ಈಶ್ವರ ಸಣ್ಣತಮ್ಮ ರಾಮಾ ನಾಯ್ಕ ಈತನು ಚಾಕುವಿನಿಂದ ಜೋರಾಗಿ ಇರಿದು ಗಾಯಗೊಳಿಸಿರುವುದಾಗಿ ಆರೋಪಿಸಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪ್ರಕರಣ ದಾಖಲಿಸಿಕೊಂಡಿರುವ ಎಸೈ ಭರತ್ ತನಿಖೆ ಕೈಗೊಂಡಿದ್ದಾರೆ.
Leave a Comment