ಬೀಜೆಂಗ್ : ಜಗತ್ತಿನಲ್ಲಿ ವೇಗದ ರೈಲು ಅಭಿವೃದ್ದಿಪಡಿಸಲು ಜಪಾನ್ ಹೆಸರುವಾಸಿ ಆದರೀಗ ಜಪಾನ್ ದೇಶವನ್ನೂ ಮೀರಿಸುವ ರೀತಿಯಲ್ಲಿ ಭೂಮಿ ಮೇಲೆ ಓಡುವ ಅತಿವೇಗದ ಮ್ಯಾಗ್ಲೆವ್ ರೈಲನ್ನು ಅಭಿವೃದ್ದಿಪಡಿಸಿದ ಖ್ಯಾತಿಗೆ ಚೀನಾ ಪಾತ್ರವಾಗಿದೆ.
ಮ್ಯಾಗ್ಲೆವ್ ರೈಲು ಹಳಿಗಳ ಸಂಪರ್ಕ ವಿಲ್ಲದೇ ಇಲೆಕ್ಟೊçÃಮ್ಯಾಗ್ನೆಟ್ ಪ್ರಭಾವ ದಿಂದ ಓಡುತ್ತದೆ. ಇದು 1500 ಕಿ.ಮೀ. ಮಿತಿಯೊಳಗೆ ಪ್ರಯಾಣಿಸಲು ಅತಿ ವೇಗದ ಸಂಚಾರ ಸಾಧನ.

ಇದೊಂದು ಗರಿಷ್ಠ ವೇಗದ ರೈಲು ಆಗಿರುವುದರಿಂದ ಇಂತಹ ರೈಲಿನಲ್ಲಿ ಓಡಾಟ ಸುರಕ್ಷಿತವಾಗಿದ್ದು ಶಬ್ಧ ಮಾಲಿನ್ಯವೂ ಅತಿ ಕಡಿಮೆ. ಟ್ರಾಫಿಕ್ ಜಾಮನ್ ತೊಂದರೆಯೂ ಇರುವುದಿಲ್ಲ. ಬೀಜೆಂಗ್ ಮತ್ತು ಶಾಂಘೈ ಮಧ್ಯೆ ವಿಮಾನದಲ್ಲಿ ಯಾನ ಮಾಡಲು 2 ಗಂಟೆ ಹಿಡಿಯುತ್ತದೆ. ಇದೇ ತೆರನಾಗಿ ಹೈಸ್ಪೀಡ್ ರೈಲಿನಲ್ಲಿ 2.5 ಗಂಟೆಯಲ್ಲಿ ಈ ನಿಗದಿತ ಸ್ಥಳ ತಲಪಬಹುದು. ಗಂಟೆಗೆ 600 ಕಿ.ಮೀ ವೇಗದಲ್ಲಿ ಓಡುವ ಮ್ಯಾಗ್ಲೆವ್ ರೈಲನ್ನು ಚೀನಾವಲ್ಲದೇ, ಜರ್ಮನಿ, ಜಪಾನ್ ಇಂಗ್ಲೆAಡ್ ಕೆನಡಾ ಹಾಗೂ ಅಮೆರಿಕಾ ದೇಶವನ್ನು ಅಭಿವೃಪಡಿಸುತ್ತಿವೆ,
ಚೀನಾದಲ್ಲಿ ಮ್ಯಾಗ್ಲೆವ್ ರೈಲಿನ ವೇಗಕ್ಕೆ ಸರಿಹೊದುವ ಸೂಕ್ತವಾದ ಹಳಿಗಳಲ್ಲಿ, ಹೀಗಾಗಿ ಸದ್ಯ ತಯಾರಿಸಿರುವ ಮಾದರಿ ಮ್ಯಾಗ್ಲೆಟ್ ರೈಲಿನ ಓಡಾಟಕ್ಕೆ ಪ್ರತ್ಯೇಕವಾದ ನಿರ್ಮಿಸಲಾಗಿದೆ.
ಚೀನಾದ ಕೆಲವು ನಗರಗಳು ಮ್ಯಾಗ್ಲೆವ್ ರೈಲು ಓಡಾಟಕ್ಕಾಗಿಯೇ ಹಳಿಗಳನ್ನು ನಿರ್ಮಿಸಲು ಉದ್ದೇಶಿಸಿದೆ, ಈ ದಿಸೆಯಲ್ಲಿ ಸಂಶೊAಧನೆ ಹಾಗೂ ಸಂಚಾರ ಪ್ರಯೋಗ ನಡೆಯುತ್ತಿದೆ. ಶಾಂಘೈ-ಹಾಂಗ್ ಝೋವ್ ಮ್ಯಾಗ್ಲೆವ್ ಹಳಿ ಹಾಗೂ ಚೆಂಗ್ಡು ಚೊಂಗ್ ಕ್ವಿಂಗ್ ಮ್ಯಾಗ್ಲೆವ್ ಹಳಿ ನಿರ್ಮಿಸುವುದಕ್ಕೆ ಚಿಂತನೆ ನಡೆಸಲಾಗಿದೆ .2019 ರ ಚೀನಾದ ಮಾರ್ಗಸೂಚಿಯಂತೆ ಪ್ರಮುಖ ನಗರಗಳ ಮಧ್ಯೆ ಮೂರು ಗಂಟೆಗಳ ಪ್ರಯಾಣಿಸುವ ಸಾಧನಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.
Leave a Comment