ಹೊನ್ನಾವರ: ಕೋರೊನಾ ಎರಡನೇ ಅಲೆಯನ್ನು ದಿಟ್ಟವಾಗಿ ಎದುರಿಸಿದ ತಾಲ್ಲೂಕು ಆಸ್ಪತ್ರೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ತಾಲೂಕಿನ ಎಲ್ಲಾ 9 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮತ್ತು ಕೆ.ಪಿ.ಸಿ.ಸಿ. ಸದಸ್ಯ ಪ್ರಶಾಂತ ದೇಶಪಾಂಡೆ 184 ಸಹಾಯ ಹಸ್ತ
ಮೆಡಿಕಲ್ ಕಿಟ್ ರವಾನಿಸಿ ಅಭಿನಂದಿಸಿದ್ದಾರೆ.
ಈ ಮೆಡಿಕಲ್ ಕಿಟ್‍ಗಳನ್ನು ಶುಕ್ರವಾರ ಮುಂಜಾನೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ನಗರದ ಸರಕಾರಿ ಆಸ್ಪತ್ರೆಗೆ ತೆರಳಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಉಷಾ ಹಾಸ್ಯಗಾರ ಮತ್ತು ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ರಾಜೇಶ ಕಿಣಿ, ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾಜಿ ಸಚಿವ ಆರ್. ವಿ. ದೇಶಪಾಂಡೆ ನಮ್ಮ ತಾಲೂಕಿನ ಹೆಲ್ತ್ ವಾರಿಯರ್ಸಗಳಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಈ ಹಿಂದೆಯು ಹಲವು ಬಾರಿ ಮೆಡಿಕಲ್ ಕಿಟ್ ಕಳುಹಿಸಿದ್ದರು.
ಸ್ವತಃ ಹೊನ್ನಾವರಕ್ಕೆ ಬಂದು ವಾರಿಯರ್ಸಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ. ಅನ್ನುವ ಮಾತನಾಡಿದ್ದರು ಎಂದರು. ನಂತರ ಹಳದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಡಾ|| ವೈಶಾಲಿ ನಾಯ್ಕ, ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಡಾ|| ಮಂಜುನಾಥ ಅವರಿಗೆ ಮತ್ತು ಅರೇಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಡಾ|| ಸಂತೋಷ ಅವರಿಗೆ ಕಾಂಗ್ರೆಸ್ ಸಹಾಯ ಹಸ್ತದ ಕಿಟ್‍ಗಳನ್ನು ಹಸ್ತಾಂತರಿಸಲಾಯಿತು.




ಈ ಸಂದರ್ಭದಲ್ಲಿ ಹೊನ್ನಾವರ ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ, ಯುವ ಕಾಂಗ್ರಸ್ ಅಧ್ಯಕ್ಷ ಸಂದೇಶ ಶೆಟ್ಟಿ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ, ಅಲ್ಪಸಂಖ್ಯಾತ ವಿಭಾಗದ ಜಕ್ರಿಯಾ ಶೇಖ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಸೇವಾದಳದ ಕೃಷ್ಣ ಮಾರಿಮನೆ, ಹಿಂ.ವರ್ಗ ವಿಭಾಗದ ಕಾರ್ಯದರ್ಶಿ ಗಜು ನಾಯ್ಕ, ಪಕ್ಷದ ಹಿರಿಯ ಮುಖಂಡರಾದ ಬಾಲಚಂದ್ರ ನಾಯ್ಕ, ಮಂಜುನಾಥ ಖಾರ್ವಿ, ಮಾದೇವ ನಾಯ್ಕ, ಕರ್ಕಿ, ಹನೀಫ್ ಶೇಖ, ಕೃಷ್ಣ ಹರಿಜನ, ಜೋಸೆಫ್ ಡಿ`ಸೋಜಾ, ರಾಘು ಮೇಸ್ತ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು. ,
Leave a Comment