ಬೀದರ್ :
ಅಕ್ರಮ ಗಾಂಜಾ ಸಾಗಣೆ ಆರೋಪದ ಮೇಲೆ ಹಲವರನ್ನು ಬಂಧಿಸಿ,ರೂ.8,95,300ಮೊತ್ತದ ವಸ್ತುಗಳನ್ನು
ಜಪ್ತಿಮಾಡಿಕೊಂಡು ಆರೋಪಿಗಳ ವಿರುದ್ಧ ಬೀದರ್ ಮಾರ್ಕೆಟ್ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೀದರ ಮಾರ್ಕೆಟ್ ಪೊಲೀಸ್ ಠಾಣೆಯ ಸರಹದ್ದಿನ್ ಕನನ್ ಕಾಲೋನಿಯ ಒಂದು ಮನೆಯ
ಮುಂದೆ ನಿಂತಿರುವ ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡಲು
ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ವರಿಷ್ಟಾಧಿಕಾರಿ ಡಿ.ಎಲ್.ನಾಗೇಶ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್
ವರಿಷ್ಟಾಧಿಕಾರಿ ಡಾ.ಗೋಪಾಲ್ ಬ್ಯಾಕೋಡ್ ಅವರ ಸೂಚನೆ ಮೇರೆಗೆ ಸಿಪಿಐ ಎಂ.ಎಚ್.ಸತೀಶ ನೇತೃತ್ವದಲ್ಲಿ
ದಾಳಿ ನಡೆಸಿ, ಆರೋಪಿ ಬೀದರ್ ಕನನ ಕಾಲೋನಿಯ ವಾಹನ ಚಾಲಕ ಮಹ್ಮದ ಆರೀಫ್‍ನನ್ನು ದಸ್ತಗಿರಿ ಮಾಡಲಾಗಿದೆ.

ಬಂಧಿತನಿಂದ ಅಂದಾಜು ರೂ.3,17,700ಮೌಲ್ಯದ 1 ಕ್ವಿಂಟಾಲ್ 58 ಕೆ.ಜಿ 850 ಗ್ರಾಂ ಗಾಂಜಾ, ರೂ, 600 ನಗದು, 1ರಿಯಲ್‍ಮೀ
ಮೊಬೈಲ್, ರೂ.3ಲಕ್ಷ ಮೌಲ್ಯದ ಒಂದು ಸ್ಕಾರ್ಪಿಯೋ ಕಾರು ಹಾಗೂ ರೂ.2ಲಕ್ಷ ಮೌಲ್ಯದ 1ಫೋರ್ಡ ಕಂಪನಿ ಕಾರ್,
ರೂ.75ಸಾವಿರ ಮೌಲ್ಯದ 1 ಆಟೋ ಸೇರಿ ಒಟ್ಟು ಅಂದಾಜು ಕಿಮ್ಮತ್ತು ರೂ.8,95,300 ಮೊತ್ತದ ಸಾಮಗ್ರಿ
ಜಪ್ತಿ ಮಾಡಿಕೊಂಡು ಘಟನೆ ಕುರಿತು ಬೀದರ ಮಾರ್ಕೇಟ್ ಪೊಲೀಸ್ ಠಾಣೆ ಅಪರಾಧ ಸಂ. 44/2021
ಕಲಂ. 20(ಬಿ) ಎನ್.ಡಿ.ಪಿ.ಎಸ್. ಆಕ್ಟ್ ನೇದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ
ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ4 ಜನ ಆರೋಪಿತರು ತಪ್ಪಿಸಿಕೊಂಡಿದ್ದು,ಪತ್ತೇ ಕಾರ್ಯ ಜಾರಿಯಲ್ಲಿರುತ್ತದೆ.
ಈ ಸಂಬಂಧ ಬೀದರ ಮಾರ್ಕೇಟ್ ಪೊಲೀಸ್ ಠಾಣೆ ಅಪರಾಧ ಸಂ. 44/2021 ಕಲಂ. 20(ಬಿ) ಎನ್.ಡಿ.ಪಿ.ಎಸ್. ಆಕ್ಟ್
ನೇದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ
4 ಜನ ಆರೋಪಿತರು ತಪ್ಪಿಸಿಕೊಂಡಿದ್ದು, ಪತ್ತೇ ಕಾರ್ಯ ಜಾರಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ಡಿ.ಎಲ್.ನಾಗೇಶ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ,
Leave a Comment