ನವದೆಹಲಿ;
ಪಲ್ಸ್ ಆಕ್ಸಿ ಮೀಟರ್ ,ರಕ್ತದೊತ್ತಡ, ಪರೀಕ್ಷಕ ಸೇರಿದಂತೆ 620ಕ್ಕೂ ಹೆಚ್ಚಿನ ವೈದ್ಯಕೀಯ ಉಪಕರಣಗಳ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಶನಿವಾರ ತಿಳಿಸಿದೆ.
ಜುಲೈ 20ರಿಂದ ಅನ್ವಯವಾಗುವಂತೆ ಆಕ್ಸೈಮೀಟರ್ , ಗ್ಲೂ ಕೊ ಮೀಟರ್ , ರಕ್ತದೊತ್ತಡ ಪರೀಕ್ಷಕ, ನೆ ಬ್ಯುಲೈಸರ್, ಮತ್ತು ಡೀಟೇಲ್ ತರ್ಮೋ ಮೀಟರ್ ಗಳ ತಯಾರಿಕಾ ವೆಚ್ಚ ಮತ್ತು ಮಾರಾಟದ ನಡುವಿನ ವ್ಯತ್ಯಾಸವು ಶೇ 70ಕ್ಕಿಂತ ಜಾಸ್ತಿಯಾಗುವಂತಿಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಮತ್ತು ಔಷಧೀಯ ವಸ್ತುಗಳ ಬೆಲೆ ನಿಗದಿ ಆಯೋಗವು ( ಎನ್ ಪಿಪಿಎ) ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿಗಳು ಬೆಲೆಯಲ್ಲಿ ಇಳಿಕೆ ಮಾಡಿ ವೆ.
ಜುಲೈ 23, 20 21 ರಂತೆ, ಒಟ್ಟಾರೆ 684 ಉಪಕರಣ ಗಳಿದ್ದು ಅವುಗಳಲ್ಲಿ 620( ಶೇ91) ಉಪಕರಣಗಳ mrp ಯಲ್ಲಿ ಇಳಿಕೆ ಮಾಡಲಾಗಿದೆ. ಆಮದಾಗಿರುವ ಮತ್ತು ದೇಶದಲ್ಲಿ ತಯಾರಾಗಿರುವ ಉಪಕರಣಗಳು ಇವುಗಳಲ್ಲಿ ಸೇರಿವೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಆಮದಾಗಿರುವ ಪಲ್ಸ್ ಆಕ್ಸಿ ಮೀಟರ್, ರಕ್ತದೊತ್ತಡ ಪರೀಕ್ಷಕ, ನೆ ಬ್ಯುಲೈಸರ್, ಉಪಕರಣಗಳ ಬೆಲೆಯಲ್ಲಿ ಗರಿಷ್ಠ ಇಳಿಕೆಯಾಗಿದೆ .
Leave a Comment