ಭಟ್ಕಳ:ಐಸಿಸ್ ನಂಟಿರೋ ಶಂಕೆ ಹಿನ್ನೆಲೆ ಕೇಂದ್ರ ಎನ್ಐಎ ತಂಡದಿಂದ ಭಟ್ಕಳ ತಾಲೂಕಿನ ಎರಡು ಮನೆಗಳ ಮೇಲೆ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ .
ತಾಲೂಕಿನ ಸಾಗರ ರಸ್ತೆ ಹಾಗೂ ಉಮರ್ ಸ್ಟ್ರೀಟನಲ್ಲಿರುವ ಎರಡು ಮನೆಗಳ ಮೇಲೆ ಕೇಂದ್ರದ ಎನ್.ಐಎ ದಂಡದಿಂದ ದಾಳಿ ನಡೆದಿದ್ದು.ಈ ಹಿಂದೆ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ಓರ್ವನ ಸಂಬಂದಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.ಜಿಲ್ಲೆಯ ಉನ್ನತಾಧಿಕಾರಿಗಳ ಜತೆ ಗುಪ್ತವಾಗಿ ಎನ್‌ಐಎ ತಂಡ ದಾಳಿ ನಡೆಸಿದೆ.

ಈ ವಿಚಾರಕ್ಕಾಗಿ ನಿನ್ನೆಯಿಂದಲೇ ಭಟ್ಕಳದಲ್ಲಿ ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಮೊಕ್ಕಾಮ್ ಹೂಡಿದ್ದು. ಇನ್ನೇನು ಹೆಚ್ಚಿನ ಮಾಹಿತಿ ವಿಚಾರಣೆ ಬಳಿಕವೇ ತಿಳಿದು ಬರಬೇಕಿದೆ. ಈ ಸಂಭಂದ ತಾಲೂಕಿನ ಹಲವೆಡೆ ಪೊಲೀಸ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ;ನಿಮ್ಮ ಸ್ನೇಹಿತರಿಗೂ ಫಾರ್ವರ್ಡ್ ಮಾಡಿ ಗುಂಪಿಗೆ ಸೇರಿಸಿ.
ಗ್ರುಪ್ ಸೇರಲು ಈ ಲಿಂಕ್ ಒತ್ತಿhttps://chat.whatsapp.com/GtLqeUMgaXDGRtGRyC9KnP
Leave a Comment