ಬೆಂಗಳೂರು : ದೇಶಕ್ಕೆ ಸ್ವಾಂತAತ್ರö್ಯ ಲಭಿಸಿ 75 ವರ್ಷ ಸಂದಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೆ ಆರಂಭವಾಗಿರುವ ಈ ಕಾರ್ಯಕ್ರಮವನ್ನು 2023ರ ಆ. 15ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಎಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ತಿಳಿಸಿದ್ದಾರೆ.
ಪ್ರತಿಯೊಬ್ಬ ಭಾರತೀಯರಿಗೆ ರಾಷ್ಟç ಗೀತೆ ಹಾಡಿ https://rashtragaan.in/ ನಲ್ಲಿ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಅಪ್‌ಲೋಡ್ ಮಾಡಿದ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುತ್ತದೆ. ಕಾರ್ಯಾಲಯ ಹಾಗೂ ಅಧೀನ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮತ್ತು ಇಲಾಖೆ ಫಲಾನುಭವಿಗಳಿಗೂ ಇದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಹೆಚ್ಚು ಪ್ರಚಾರ ನೀಡುವಂತೆ ರಾಜ್ಯದ ಡಿಸಿಗಳಿಗೆ ವಂದಿತಾ ಕೋರಿದ್ದಾರೆ.
Leave a Comment