ಭಟ್ಕಳ: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ಬಾಕ್ಸಿಂಗ್ ಚಾಂಪಿಯನ್ಸಿಪ 2021 ರಲ್ಲಿ ಭಟ್ಕಳದ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟನ ಇಬ್ಬರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ನಡೆಸಲಾದ ರಾಜ್ಯ ಮಟ್ಟದ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ಸಿಪ ಸ್ಪರ್ಧೆಯಲ್ಲಿ ಭಟ್ಕಳ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟನ 4 ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಭಾಗವಹಿಸಿದ್ದು .ಪಾಯಿಂಟ್ ಫೈಟಿಂಗ್ ಹಾಗೂ ಕ್ರಿಯೇಟಿವ್ ಫಾಮ್ ವೇಫನ್ ಮಹಿಳೆಯ ವಿಭಾಗದಲ್ಲಿ ಭಟ್ಕಳದ ಆಸರಕೇರಿಯ ನಾಗಶ್ರೀ.ವಿ.ನಾಯ್ಕ ಹಾಗೂಚಿನ್ನದ ಪದಕ ಹಾಗೂ ಪಾಯಿಂಟ್ ಫೈಟಿಂಗ್ ಪುರುಷರ ವಿಭಾಗದಲ್ಲಿ ಮಹಮ್ಮದ್ ಶಮಾಜ್ ಶೇಕ್ ಚಿನ್ನದ ಪದಕ ಪಡೆದು ಗೋವಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ದೆಗ ಆಯ್ಕೆಯಾಗಿದ್ದಾರೆ.

ಹಾಗೂ ಕಿಕ್ ಫೈಟಿಂಗ್ ಪುರುಷರ ವಿಭಾಗದಲ್ಲಿ ಯೊಗೇಶ.ಆರ್. ನಾಯ್ಕ ಕಂಚಿನ ಪದಕ ಮತ್ತು ಲೋಕೌಂಟ್ ಪುರುಷರ ವಿಭಾದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಇವರಿಗೆ ಭಟ್ಕಳ ಶೋಟೊಕಾನ್ ಕರಾಟೆ ಇನ್ಸ್ಟಿಟ್ಯೂಟ್ ಹಾಗೂ ಉತ್ತರಕನ್ನಡ ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ನ ವತಿಯಿಂದ ಧನ್ಯವಾದ ಸಲ್ಲಿಸಿದ್ದಾರೆ
ಅಲ್ಲದೆ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ಪ್ರಧಾನ* ಕಾರ್ಯದರ್ಶಿ ಪೂಜಾ ಹರ್ಷರವರು ಉತ್ತರ ಕನ್ನಡ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಅಭಿಲೇಷನ್ ಗೌರವವನ್ನು ಭಟ್ಕಳದ ಕರಾಟೆ ತರಬೇತುದಾರರಾದ ಈಶ್ವರ ನಾಯ್ಕರವರಿಗೆ ನೀಡಿದ್ದಲ್ಲದೆ. ಅವರನ್ನು ಉತ್ತರ ಕನ್ನಡ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷರಾಗಿಯು ಕೂಡ ಆಯ್ಕೆ ಮಾಡಿದ್ದಾರೆ.

Leave a Comment