ಮಂಗಳೂರು : ಬಂದರ್ ಗಾಂಧಿ ಸನ್ನ್ ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ 1725 k.g.ಗೂ ಅಧಿಕ ಅಪಾಯಕಾರಿ ಸ್ಫೋಟಕ್ ಸಾಮಗ್ರಿ ದಾಸ್ತಾನು ಇರಿಸಿರುವುದು ಬೆಳಕಿಗೆ ಬಂದಿದ್ದು. ಆರೋಪಿಯನ್ನು ಬಂಧಿಸಲಾಗಿದು ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಮಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಎಂದು ಗುರುತಿಸಲಾಗಿದೆ.

ಆರೋಪಿಯಿಂದ 400 ಕೆ.ಜಿ ಸಲ್ಫರ್ ಪೌಡರ್, 350 ಕೆ,ಜಿ, ಪೋಟ್ಯಾಷಿಯಂ ನೈಟ್ರೇಟ್, 50 ಕೆ.ಜಿ. ಬ್ಯಾರಿಯಂ ನೈಟ್ರೇಟ್, 395 ಕೆ,ಜಿ, ಪೊಟ್ಯಾಚಿಯಂ ಕ್ಲೋರೈಡ್, 260 ಕೆ.ಜಿ. ತೂಕದ ವಿವಿಧ ಬಗೆಯ ಆಲ್ಯುಮಿನಿಯಂ ಪೌಡರ್, 30 ಕೆ.ಜಿ. ಲೀಡ್ ಬಾಲ್ಸ್, 240 ಕೆ.ಜಿ. ಚಾರ್ಕೊಲ್,100 ಏರ್ ರೈಲ್‌ಗಳನ್ನು ಒಳಗೊಂಡ 140 ಪಿಲೆಟ್ಸ್ ಪ್ಯಾಕೇಟ್, 100 ಏರ್ ರೈಫಲ್‌ಗಳನ್ನು ಒಳಗೊಂಡ 21 ಪಿಲೆಟ್ಸ್ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 1.11 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಈ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು. 10 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗೆ ಸ್ಫೋಡಕಗಳನ್ನು ಪೂರೈಕೆ ಮಾಡುವವರು ಯಾರು ಈತನ ಜತೆ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Leave a Comment