ಶಿರಸಿ: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಯೋರ್ವನನ್ನು ಗ್ರಾಮೀಣ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ವೆಂಕಟೇಶ ಬೋವಿ (52) ಬಂಧಿತ ಆರೋಪಿಯಾಗಿದ್ದಾನೆ.
ಮರಾಠಿಕೊಪ್ಪದ ನಿವಾಸಿ ಮಂಜುನಾಥ ಈರಾ ದೇವಾಡಿಗ (44) ಗಾಯಗೊಂಡ ಆಟೋ ಚಾಲಕನಾಗಿದ್ದು, ಆಸ್ಪತ್ರೆಗೆ
ದಾಖಲಾಗಿದ್ದಾನೆ. ಆಟೋ ಚಾಲಕ ಬಂಧಿತ ಅರೋಪಿ ವೆಂಕಟೇಶನನ್ನು ಕರೆದುಕೊಂಡು ಇಲ್ಲಿನ ಕಸದಗುಡ್ಡೆ ಪ್ರದೇಶಕ್ಕೆ ಬಾಡಿಗೆಗೆ ತೆರಳಿದ್ದ ಎನ್ನಲಾಗಿದೆ.
ಈ ವೇಳೆಯಲ್ಲಿ ಖೂರ್ಸೆ ಕಂಪೌAಡ್ ಬಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಬಂಧಿತ ಆರೋಪಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ
ಕೈಗೊಂಡಿದ್ದಾರೆ.
Leave a Comment