ಬಂಗಾರ ದರದಲ್ಲಿ ಮತ್ತೆ ತೀವ್ರ ಹೋಯ್ಪಾಟ ಆರಂಭವಾಗಿದೆ. 10 ಗ್ರಾಂ ಒಂದಕ್ಕೆ 50,000 ರೂಗೆ ತಲುಪಿದ ನಂತರ ಒಂದಿಷ್ಟು ಏರಿಳಿತ ಕಂಡು ಈಗ 46000ರೂಗೆ ಕುಸಿದು ಅಚ್ಚರಿ ಮೂಡಿಸಿದೆ.
ಎಪ್ರಿಲ್ ನಂತರ ಬಂಗಾರ ಇಷ್ಟು ಕೆಳಮಟ್ಟಕ್ಕೆ ಕುಸಿದಿರುವುದು ಇದೇ ಮೊದಲು ಡಾಲರ್ ಮೌಲ್ಯ ಹೆಚ್ಚಳ ಹಾಗೂ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವ ಕಾರಣ ಹಾಗೂ ಷೇರುಮಾರುಕಟ್ಟೆಯಲ್ಲಿನ ತೇಜಿ ಪ್ರವೃತ್ತಿ ಬಂಗಾರ ದರದ ಮೇಲೆ ಪರಿಣಾಮ ಬೀರಿದೆ. ಕೇವಲ ಭಾರತ ಮಾತ್ರವಲ್ಲ ಅಂತರಾಷ್ಟೀಯ ಪೇಟೆಯಲ್ಲೂ ಇಳಿಮುಖವಾಗಿದೆ. ಮುಂಬಯಿ ಕಿನಿವಾಲ ಪೇಟೆಯಲ್ಲಿ ಜು.31 ರಂದು 48000 ರೂ ಶ್ರೇಣಿಯಲ್ಲಿದ್ದ ದರ ಆ.10 ರಂದು ಶುದ್ಧ ಬಂಗಾರ 46,150 ರೂ ಸ್ಟಾçಂಡರ್ಡ್ ಬಂಗಾರ 45,950 ರೂಗೆ ಕುಸಿದಿದೆ. ಲಂಡನ್ ಪೇಟೆಯಲ್ಲಿ ಇತ್ತೀಚೆಗೆ ಔನ್ಸ್ ಒಂದಕ್ಕೆ 1,745.31 ಡಾಲರ್‌ಗೆ ಇಳಿಮುಖವಾಗಿತ್ತು.

ಜಾಗತಿಕ ಚಿನಿವಾಲ ಪೇಟೆಗಳಲ್ಲಿನ ಮಂದ ಪ್ರವೃತ್ತಿಯ ಹಿನ್ನಲೆಯಲ್ಲಿ ಬಂಗಾರ ದರ ಕಳೆದೊಂದು ತಿಂಗಳಲ್ಲಿ ಸುಮಾರು 2000 ರೂ ದಷ್ಟು ಇಳಿಮುಖವಾಗಿದೆ. ಕಳೆದ ವರ್ಷ 56,200 ರೂವರೆಗೆ ಏರಿದ್ದ ದರ ಈಗ ಒಮ್ಮಲೆ 46000 ರೂಗೆ ಇಳಿಕೆಯಾಗಿದ್ದರಿಂದ 10,000 ರೂದಷ್ಟು ಕಡಿಮೆಯಾದಂತಾಗಿದೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಜರ್ವ್ ಬಡ್ಡಿ ದರ ಏರಿಕೆ ಮಾಡಿರುವುದು ಬಂಗಾರ ದರದ ಮೇಲೆ ಪರಿಣಾಮ ಬೀರಿದೆ.
ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಗೊಂಡಾಗ ಬಂಗಾರಕ್ಕೆ ಬೇಡಿಕೆ ಹೆಚ್ಚಳವಾಯಿತು. ಜೊತೆಗೆ ಹೂಡಿಕೆ ಉದ್ದೇಶ ಹಾಗೂ ಆಭರಣ ಉದ್ಯಮದಿಂದಲೂ ಉತ್ತಮ ಬೇಡಿಕೆ ಕುದುರಿತು. ಗೋಲ್ಟ್ ಇಟಿಎಫ್ (ಸುವರ್ಣ ವಿನಿಮಯ ನಿಧಿ)ಗಾಗಿ ಒಂದು ಟನ್ ಬಂಗಾರಕ್ಕೆ ಬೇಡಿಕೆ ಒಂದಿದ್ದರಿAದ ಇದರಲ್ಲಿನ ಒಟ್ಟು ಸಂಗ್ರಹದ ಪ್ರಮಾಣ 34,2 ಟನ್‌ಗೆ ಹೆಚ್ಚಳವಾಗಿದೆ. 2013, ಸೆಪ್ಟಂಬರ್ ನಂತರ ಇದು ಅತಿ ಹೆಚ್ಚಿನ ಪ್ರಮಾಣ ಸಂಗ್ರಹವಾಗಿದೆ.
ಇನ್ನೂ ಆರ್‌ಬಿಐದಲ್ಲಿ 2020-21ನೇ ಸಲಿನ ಅಂತ್ಯದ ವೇಳೆಗೆ 33,880 ದಶಲಕ್ಷ ಡಾಲರ್ ಮೌಲ್ಯದ ಬಂಗಾರ ದಾಸ್ತಾನು ಸಂಗ್ರಹವಾಗಿದೆ. 2000-01 ನೇ ಸಾಲಿನಲ್ಲಿ ಇದು 2,725 ದಶಲಕ್ಷ ಡಾಲರ್ ದಷ್ಟಿತ್ತು. ನಂತರ ಆಗಸ್ಟ್ ಮೊದಲ ವಾರದವರೆಗೆ 48000 ರೂ ಶ್ರೇಣಿಯಲ್ಲೇ ಸಾಗಿದ ದರ ಎರಡನೇ ವಾರದ ಹೊತ್ತಿಗೆ 46000 ರೂಗೆ ಕುಸಿದಿದೆ.
ಹಲವು ದೇಶಗಳಲ್ಲಿ ಕೋವಿಡ್ ಮೂರನೇ ಅಲೆ ಪ್ರಭಾವ ಹೆಚ್ಚಳವಾಗಿದೆ. ಈ ಹಿನ್ನಲೆಯಲ್ಲಿ ಆದೇಶಗಳ ಕೇಂದ್ರ ಬ್ಯಾಂಕುಗಳು ಅವುಗಳು ಅರ್ಥವ್ಯವಸ್ಥೆ ಕುಸಿಯದಂತೆತಡೆಗಟ್ಟಲು ಪುನಶ್ವೇತನ ಪ್ಯಾಕೇಜ್‌ಗಳನ್ನು ಪ್ರಕಟಿಸಿವೆ. ಈ ಹಿನ್ನಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಮಂದ ಪ್ರವೃತ್ತಿ ತಲೆದೋರಿದೆ. ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಬಂಗಾರ ದರ ಅಲ್ಟಾವಧಿಯಲ್ಲಿ ಒಂದು ಔನ್ಸ್ಗೆ 1750-1800 ಡಾಲರ್ ಶ್ರೇಣಿಯಲ್ಲಿ ಹೊಯ್ಫಾಡಲಿದೆ ಎಂದು ಚಿನಿವಾಲ ಪೇಟೆಯ ವಿಶ್ಲೇಷಕರು ತಿಳಿಸಿದ್ದಾರೆ.
Leave a Comment