ಸೇವಾಸಿಂಧು ಪೋರ್ಟಲ್ ಮುಖಾಂತರ ಆ.24 ರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮುಖಾಂತರ ಬಸ್‍ಪಾಸ್‍ಗೆ ಅರ್ಜಿ ಸಲ್ಲಿಸಲು ಕೆ .ಎಸ್. ಆರ್. ಟಿ. ಸಿ ಅವಕಾಶ ನೀಡಿದೆ.
ಈ ಕುರಿತು ಕೆ .ಎಸ್ .ಆ ರ್ .ಟಿ .ಸಿ ಬೆಂಗಳೂರು ಪ್ರಕಟಣೆ ಹೊರಡಿಸಿದ್ದು, ಕೆ .ಎಸ್ .ಆ ರ್ .ಟಿ .ಸಿ
ನಿಗಮದ ವಿದ್ಯಾರ್ಥಿ ಪಾಸ್ ಸೇವೆಗಳನ್ನು ಸೇವಾಸಿಂಧು ಯೋಜನೆಯಡಿ ಆನ್‍ಲೈನ್‍ನಲ್ಲಿ ನಿರ್ವಹಿಸುವ ಸಂಬಂಧ ಸರ್ಕಾರದ ಆದೇಶವನ್ನು ಸ್ವೀಕರಿಸಿ, ಸೇವಾಸಿಂಧು ಪೋರ್ಟಲ್ ಮುಖಾಂತರ ವಿದ್ಯಾರ್ಥಿ ಬಸ್ ಪಾಸುಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2021-22 ನೇ ಸಾಲಿನಲ್ಲಿ ಸೇವಾಸಿಂಧು ತಂತ್ರಾಂಶವನ್ನು ಇನ್ನಷ್ಟು ಸರಳವಾಗಿಸಿ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ ಬಸ್ ಪಾಸ್‍ಗಳನ್ನು ಸೇವಾ ಸಿಂಧೂ ಪೋರ್ಟಲ್ ನಲ್ಲಿ ವಿತರಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರಸಕ್ತ ಸಾಲಿಗೆ ಆ.24 ರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮುಖಾಂತರ ಬಸ್ ಪಾಸ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು
k.s.r.t.c ಪ್ರಕಟಣೆ ಹೊರಡಿಸಿದೆ.
Leave a Comment