ಹೊನ್ನಾವರ; ಕೆಲವು ದಿನಗಳ ಹಿಂದೆ ಗುಣವಂತೆ ಮಂಕಿ ಭಾಗದಲ್ಲಿ ತಮ್ಮ ಐಶರಾಮಿ ಕಾರಿಲ್ಲಿ ಬಂದು ರಸ್ತೆಯ ಪಕ್ಕದಲ್ಲಿ ಮಲಗಿದ್ದ ಗೋ ಗಳರನ್ನು ಕೊನೆಗೂ ಭಂದಿಸುವಲ್ಲಿ ಪೋಲಿಸರು ಯಶಸ್ವಿ ಆಗಿದ್ದಾರೆ. ಮಾವಿನಕಟ್ಟಾ ಮತ್ತು ಗುಣವಂತೆ ಭಾಗದಲ್ಲಿ ವಾಹನದಲ್ಲಿ ಗೋ ಸಾಗಟ ಇತ್ತಿಚೀಗೆ ಸಿ ಸಿ ಟಿವಿಯಲ್ಲಿ ಸೇರೆಯಾಗುವ ಮೂಲಕ ವ್ಯಾಪಕ ಚರ್ಚೆಯಾಗುತ್ತಿತ್ತು.
ಈ ಎರಡು ವಿಡಯೋಗಳನ್ನು ಆಧರಿಸಿ ಮಂಕಿ ಹಾಗು ಹೊನ್ನಾವರ ಪೋಲಿಸ್ ತಂಡ ಜಂಟಿ ಕಾರ್ಯಚರಣೆ ನಡೆಸಿ ಪ್ರಕರಣ ಬೆಳಕಿಗೆ ಬಂದ ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಯಶ್ವಸಿಯಾದರು. ಪ್ರಮುಖ10 ಜನ ಆರೋಪಿಗಳಲ್ಲಿ 7 ಜನರನ್ನು ಈಗಾಗಲೇ ಬಂಧಿಸಿದ್ದು ಇನ್ನು ಮೂವರ ಪತ್ತೆ ಆಗಬೇಕಿದೆ ಆರೋಪಿಗಳು ಕಳ್ಳತನಕ್ಕೆ ಬಳಸುತಿದ್ದ 2 ವಾಹನ ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ಮುಂದುವರೆಸಿದ್ದಾರೆ.

ಆರೋಪಿತರಾದ ಉಡುಪಿಯವಾಜೀದ ಜಾಪರ ವಾಟಿ, ಮೂಲಾರ, ದೃಶ್ಯ ದಿನೇಶ ಮೆಂಡನ್,ವಣವ ರಾಜಶೇಖರ ಶೆಟ್ಟಿ, ನರತಂದೆ ಜಾಯಿರಿ ಹುಸೇನ ಹಾಗೂ ಭಟ್ಕಳ ತಾಲೂಕಿನ ಸಯ್ಯದ್ ಮುಸ್ಸಾ ಸಯ್ಯದ್ ಅಹಮ್ಮದ, ಹನಿಫಾಬಾದ, ಮಹಮ್ಮದ ಫಯಾಜ್ ಮಹಮ್ಮದ್, ಮಹಮ್ಮದ ಇಬ್ರಾಹಿಂ ಮಹಮ್ಮದ .ಹುಸೇನ ಹವಾ,ಬಂಧಿಸಲಾಗಿದೆ. ಉಡುಪಿಯ ಅಜುರುದ್ದಿನ ,ಆಶಿಕ ಸಂಶುದ್ದಿನ ಮಲ್ಲರ್, ಭಟ್ಕಳದ ನೂರಿನ ಗೈಮಾ, ನಾಪತ್ತೆಯಾಗಿದ್ದಾರೆ. ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಮಂಕಿ ಪೋಲಿಸ ಠಾಣಿಯಲ್ಲಿ ಈ ಸಂಭದ ಪ್ರಕರಣ ದಾಖಲಾಗಿತ್ತು.
Leave a Comment