ಶಿರಸಿ : ಕಾಡುಪ್ರಾಣಿ ಸೆರೆಗೆ ಹಾಕಲಾಗಿದ್ದ ತಂತಿ ಉರುಳಿಗೆ ಸಿಲುಕಿ ಅಪರೂಪದ ಕಪ್ಪುಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಲೇಮಳಗಿ ಗ್ರಾಮದ ಬಳಿ ನಡೆದಿದೆ.
ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲು ಕಪ್ಪು ಚಿರತೆ ಇದಾಗಿದೆ. 4 ವರ್ಷದ ಹೆಣ್ಣು ಕಪ್ಪು ಚಿರತೆ ಇದಾಗಿದ್ದು. ಉರುಳು ತಂತಿಯಿAದ ಸೊಂಟದ ಭಾಗಕ್ಕೆ ತ್ರೀವ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದೆ. ಎನ್ನಲಾಗಿದೆ.

ಬೆಳಗಿನ ಜಾವದಲ್ಲಿ ಕಪ್ಪು ಚಿರತೆಯ ಬೇಲಿಯಲ್ಲಿ ಸಿಲುಕಿ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಪ್ಪುಚಿರತೆಯನ್ನು ಸುರಕ್ಷಿತವಾಗಿ ತಂತಿಯಿAದ ಬಿಡಿಸಲು ಪ್ರಯತ್ನಿಸಿದರು. ಆದರೆ ಜನಜಂಗುಳಿ ಹೆಚ್ಚಿದ್ದರಿಂದ ಕಪ್ಪು ಚಿರತೆ ಆತಂಕದಲ್ಲಿ ಹೆಚ್ಚು ಒದ್ದಾಡಿದ್ದು ಭಯದಿಂದ ಮೃತಪಟ್ಟಿರಬಹುದು ಎಂದು ಆರ್ ಎಫ್‌ಓ ಉಷಾ ಕಬ್ಬೇರ್ ತಿಳಿಸಿದ್ದಾರೆ.
ಕಾಡುಪ್ರಾಣಿ ಬೇಟಿಗೆ ಉರುಳು ಹಾಕಿದ್ದವರ ಪತ್ತಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಪಶು ವೈದ್ಯಾಧಿಕಾರಿ ಡಾ. ದನೇಶ ಕೆ.ಎನ್. ಕಪ್ಪು ಚಿರತೆ ಮರಣೋತ್ತರ ಪರೀಕ್ಷೆ ನಡೆಸಿದ್ದುಬಳಿಕ ವಲಯ ಅರಣ್ಯಾಧಿಕಾರಿ ಕಛೇರಿ ಅವರಣದಲ್ಲಿ ಅಂತ್ಯಸAಸ್ಕಾರ ನೆರವೇರಿಸಲಾಯಿತು.
Leave a Comment