ಮೂಡಿಗೆರೆ : ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದ ಆರೋಪಿ ಗೋಣಿಬಿಡು ಪಿಎಸ್ ಐ ಅರ್ಜುನ್ ಹೊನಕೇರಿ ಅವರನ್ನು ಸಿಐಡಿ ಪೊಲೀಸರು ಬುಧುವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆ.15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

2021 ಮೇ 10 ರಂದು ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬಾತನನ್ನು ಪಿಎಸ್ ಐ ಅರ್ಜುನ್ ಪ್ರಕರಣವೊಂದರ ವಿಚಾರಣೆಗೆಂದು ಠಾಣೆಗೆ ಕರಡದೋಯ್ದಿದ್ದರೂ ವಿ ಚಾರಣೆ ನೆಪದಲ್ಲಿ ಠಾಣೆಯಲ್ಲಿದ್ದ ಮತ್ತೊಬ್ಬ ಆರೋಪಿಯಿಂದ ಪುನೀತ್ ಬಾಯಿಗೆ ಮೂತ್ರ ಮಾಡಿಸಿದ್ದರು. ಜತೆಗೆ ಜಾತಿನಿಂದನೆ ಮಾಡಿದ್ದರು. ಎನ್ನಲಾಗಿದ್ದು. ಈ ಬಗ್ಗೆ ಪುನೀತ್ ಪಿಎಸ್ ಐ ವಿರುದ್ಧ ದೂರು ನೀಡಿದ್ದರು.
Leave a Comment