ಭಟ್ಕಳ: 16 ವರ್ಷದ ಅಪ್ರಾಪ್ತಯುವತಿಯೋರ್ವಳನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಯುವತಿಯ ತಾಯಿ ಶನಿವಾರ ಪ್ರಕರಣ ದಾಖಲಿಸಿದ್ದಾಳೆ .
ಆರೋಪಿಯನ್ನು ನಿತೀನ್ ಅಣ್ಣಪ್ಪ ನಾಯ್ಕ ಮುರುಡೇಶ್ವರ ಹಿರೇದೋಮಿ ನಿವಾಸಿ ಎಂದು ತಿಳಿದು ಬಂದಿದೆ. ಈತನು ಅದೇ ಊರಿನ 16 ವರ್ಷದ ಯುವತಿಯೊಂದಿಗೆ ಸ್ನೇಹ ಸಂಬಂಧ ಬೆಳೆಸಿ ಯುವತಿಯನ್ನು ಮದುವೆಯಾಗುದಾಗಿ ಪುಸಲಾಯಿಸಿ ಸೆಪ್ಟೆಂಬರ್ 1 ರಾತ್ರಿ 11.45 ರ ಸುಮಾರಿಗೆ ಕರೆ ಮಾಡಿ ನಿನ್ನೊಂದಿಗೆ ಮಾತನಾಡಬೇಕು ಮಾವಳ್ಳಿ-2 ರ ಕನ್ನಡ ಶಾಲೆ ಸಮೀಪದ ಹಳೆಯ ಮನೆಯ ಬಳಿ ಬರುವಂತೆ ಹೇಳಿ.

ನಂತರ ಅಲ್ಲಿಗೆ ಬಂದ ಯುವತಿಗೆ ಏನನ್ನು ಮಾತನಾಡಲು ಕೊಡೆದ ಮನೆಯ ಒಳಗೆ ಕರೆದುಕೊಂಡು ಹೋಗಿ ಹೆದರಿಸಿ ಬಲವಂತವಾಗಿ ಆಕೆಯ ಮೇಲೆ 2 ಬಾರಿ ಲೈಂಗಿಕ ಸಂಪರ್ಕ ಎಸೆದು ನಿನನ್ನು ಮದುವೆಯಾಗುತ್ತೇನೆ ಅಲ್ಲಿಯವರೆಗೆ ಈ ವಿಷಯವನ್ನು ಯಾರಿಗೂ ಹೇಳ ಬೇಡ ,ಹೇಳಿದರೆ ನಿನ್ನನ್ನು ನಿನ್ನ ತಂದೆ ತಾಯಿಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Leave a Comment