ಗರಿಷ್ಟ 5 ದಿನ ಸರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ
ಮನೆಯಲ್ಲಿ 2 ಅಡಿ ಸಾರ್ವಜನಿಕವಾಗಿ ಗರಿಷ್ಟ 4 ಅಡಿ ಮೂರ್ತಿ ಪ್ರತಿಷ್ಠಾಪನೆ ಮಾತ್ರ
ಸಾರ್ವಜನಿಕ ಗಣೇಶ ಮೂರ್ತಿಗೆ ಪೊಲೀಸರ ಅನುಮತಿ ಅಗತ್ಯ
ಶಾಲಾ ಕೋಲೆಜುಗಳಲ್ಲಿ ಪ್ರತಿಷ್ಠಾಪನೆ ಅವಕಾಶವಿಲ್ಲ.

ದೇವಾಲಯ್ಳಲ್ಲಿ ಸರಳವಾಗಿ ಆಚರಣೆಗೆ ಅನುಮತಿ
ಸಾರ್ವಜನಿಕವಾಗಿ ಪೆಂಡಾಲ್ ಅಳವಡಿಕೆಗೂ ನಿಯಮ
ವರ್ಡ್ಗಳಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಗಡಿ ಜಿಲ್ಲೆಗಳಲ್ಲಿ ಪಾಸಿಟಿವಿಟಿ ಶೇ.2 ಕಿಂತ ಕಡಿಮೆ ಇದ್ದರೆ ಮಾತ್ರ ಅವಕಾಶ
ಸಂಗೀತ ಮನರಂಜನೆ ಕಾರ್ಯಕ್ರಮಕ್ಕಿಲ್ಲ ಅವಕಾಶ
ಅಪಾರ್ಟ್ ಮೆಂಟ್‌ಗಳಲ್ಲಿ ಆಚರಣೆಗೆ ಒಮ್ಮಲೆ 20 ಮಂದಿಗೆ ಅನುಮತಿ
ಆಯೋಜಕರಿಗೆ ಕೊರೊನಾ ನೆಗೆಡಿವ್ ವರದಿ, ಲಸಿಕೆ ಪಡೆದ ವರದಿ ಕಡ್ಡಾಯ
ಜಿಲ್ಲಾಡಳಿತ ಸೂಚಿಸಿದ ಸ್ಥಳದಲ್ಲಿ ಮಾತ್ರ ಮೂರ್ತಿಗಳ ವಿಸರ್ಜನೆ
ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸೀಮಿತ ಜನರಿಗೆ ಅವಕಾಶ
ರಾಜ್ಯದಲ್ಲಿ ರಾತ್ರಿ ಕಪ್ಯೂ ಮುಂದುವರಿಕೆ ಯಥಾಸ್ಥಿತಿ
ಬುಹುನಿರೀಕ್ಷಿತ ಗಣೇಶೋತ್ಸವಕ್ಕೆ ಅಳೆದು – ತೂಗಿ ಕೊನೆಗೆ ಈ ಬಾರಿಯೂ ಕೆಲವು ನಿರ್ಬಂಧ ಹೇರಿ ಸರ್ಕಾರ ಗಣೇಶ ಹಬ್ಬ ಆಚರಣೆ ಅನುಮತಿ ನೀಡಿದೆ.
ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಮೀನಾ-ಮೇಷ ಡಣಿಸುತ್ತಿದ್ದ ಸರ್ಕಾರ ಕೊನೆಗೆ 17 ಮಾರ್ಗಸೂಚಿಗಳನ್ನು ಹೊರಡಿಸಿ ಅನುಮತಿ ನೀಡಿದ್ದು. ಇದರಿಂದ ಭಕ್ತರಿಗೆ ಈ ಆರಿಯೂ ನಿರ್ಬಂಧದ ಮಧ್ಯೆ ಗಣೇಶ ಹಬ್ಬವನ್ನು ಆಚರಿಸವ ಅನಿವಾರ್ಯತೆ ಎದುರಾಗಿದೆ.
ಈ ಬಾರಿ ಕೇವಲ ಐದು ದಿನಗಳು ಮಾತ್ರ ಅನುಮತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಮನರಂಜನೆ, ಸಂಗೀತ ಸಂಜೆಗೆ ನಿಬಂಧ ಹೆರಲಾಗಿದೆ.
ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಹಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೇರಳ ಹಾಗೂ ಮಹಾರಾಷ್ಟ ಗಡಿ ಜಿಲ್ಲೆಗಳಲ್ಲಿ ಹೊರತುಪಡಿಸಿ ರಾಜ್ಯದ ಉಳಿದಡೆ ಕೆಲ ಷರತ್ತುಗಳೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸಿ ಹಬ್ಬ ಆಚರಿಸಲು ಅನುಮತಿ ನೀಡಬಹುದು ಎಂದು ಸಲಹೆ ನೀಡಿದ ಹಿನ್ನಲೆಯಲ್ಲಿ ಸಂಗೀತ ಮನೋರಂಜನೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲದೆ. ಪ್ರತಿಷ್ಠಾಪನೆ ಮಾಡಬಹುದು. ಆದರೆ ಮೆರವಣಿಗೆ ಮಾಡುವಂತಿಲ್ಲ.
ವೇದಿಕೆ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಅತಿ ಹೆಚ್ಚು ಶಬ್ಧ ಬರುವಂತಹ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ. ಬಿಬಿಎಂಜಿ, ಜಿಲ್ಲಾಡಳಿತ ಸೂಚಿಸಿದ ಸ್ಥಳದಲ್ಲೇ ಗಣೇಶ ವಿಸರ್ಜನೆ ಮಾಡಬೇಕು. ವಿಸರ್ಜನೆ ಸಂದರ್ಭದಲ್ಲಿ ಸೀಮಿತ ಜನರು ಮಾತ್ರ ಇರಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ.
ನಗರ ಪ್ರದೇಶಗಳಲ್ಲಿ ಪ್ರತಿ ವಾರ್ಡ್ಗೆ ಒಂದು ಕಡೆ ಮಾತ್ರ ಗಣೇಶ ಮೂರ್ತಿ ಯನ್ನು ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಎಲ್ಲೆಂದರಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಷವೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಅವಕಾಶವಿಲ್ಲ. ದೇವಾಲಯಗಳಲ್ಲಿ ಸರಳವಾಗಿ ಆಚರಣೆಗೆ ಅವಕಾಶ ನೀಡಲಾಗಿದೆ. ಗಣೇಶೊತ್ಸವಕ್ಕೆ ಸಂಬAಧಿಸಿದAತೆ ನಡೆದ ಸಭೆಯಲ್ಲಿ ವಿಡಿಯೋ ಕಾಸ್ಫರೆನ್ಸ್ ಮೂಲಕ ಭಾಗಿಯಾಗಿದ್ದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವುದು ಬೇಡ ರಾಜ್ಯದ ದಕ್ಷಿಣ ಕನ್ನಡ, ಉಡಪಿ ಕೊಡಗು ಜಿಲ್ಲೆಗಳಲ್ಲಿ ಸೋಕು ಹೆಚ್ಚಿದೆ.
ಉಳಿದಡೆ ಸೊಂಕು ತಹದಿಯಲ್ಲಿದೆ. ಒಂದು ವೇಳೆ ಅದ್ದೂರಿ ಗಣೇಶೋತ್ಸವಕ್ಕೆ ಆಚರಿಸಲು ಅವಕಾಶ ನೀಡಿದಲ್ಲಿ ಸೋಕು ಹೆಚ್ಚಳವಾಗಿ ಯಾರೂ ಏನೂ ಮಾಡಲಾಗದಂತಹ ಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಸಲಹಾ ಸಮಿತಿಯ ಡಾ. ದೇವಿಶೆಟ್ಟಿ, ವೈರಾಲಜಿಸ್ಟ್ ಡಾ. ಮಂಜಿನಾಥ್ ಮತ್ತಿತರ ಹಬ್ಬ ಹರಿದಿನಗಳನ್ನು ಆಚರಿಸಲೇಬೇಕಾಗುತ್ತದೆ. ಆದರೆ ಅದ್ದೂರಿಯಿಂದ ಆಚರಿಸಲು ಬದಲು ಸರಳವಾಗಿ ಆಚರಣೆಗೆ ಅವಕಾಶ ನೀಡುವುದು ಸೂಕ್ತ ಹಾಗೂ ಕರ್ಯಕ್ರಮದಲ್ಲಿ ಇಂತಿಷ್ಟೆ ಜನ ಇರುವಂತೆ ನೋಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ತಜ್ಞರು, ಅಧಿಕಾರಿಗಳು ಪಾಲ್ಗೊಂಡು ತಮ್ಮ ಅಭಿಪ್ರಾಯ ವನ್ನು ವ್ಯಕ್ತಪಡಿಸಿ ಷರತ್ತುಬದ್ಧ ಗಣೇಶೋತ್ಸವಕ್ಕೆ ಅನುಮತಿ ನೀಡಬಹುದು ಎಂದರು.
Leave a Comment