ಭಟ್ಕಳ: ವರ್ಷಂಪ್ರತಿ ಆಚರಿಸುವಂತ ಗಣೇಶೋತ್ಸವಈ ವರ್ಷವು ಸಹ ತಾಲೂಕಿನಾದ್ಯಂತ ಗಣೇಶ ಚತುರ್ಥೀಯನ್ನು ಸಂಭ್ರಮದ ಸಾಂಪ್ರದಾಯಿಕ,ಕಳೆದೆರಡು ವರ್ಷಗಳಿಂದ ತೀವ್ರ ಆತಂಕ ಸೃಷ್ಟಿಸಿ ಎಲ್ಲೆಡೆ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ,ಸಾಂಸ್ಕೃತಿಕ ಸ್ವಾತಂತ್ರ್ಯವನ್ನೇ ಕಸಿದುಕೊಂಡಿರುವ ಕರೋಣ ವೈರಾಣು ಕಾಯಿಲೆಯ ಪರಿಣಾಮ,ಭಟ್ಕಳ ತಾಲ್ಲೂಕಿನ ನಲ್ಲಿ ಕಳೆ ತೀರಾ ಮಂದವಾಗಿದೆ.ಸಂಕಷ್ಟ ಹರಣ ವಿಘ್ನ ನಿವಾರಕ ಎಂದೆ ಖ್ಯಾತಿ ಪಡೆದಿರುವ ವಿಘ್ನ ನಿವಾರಕ ಗಣೇಶ ಚತುರ್ಥೀಯನ್ನು ಸಮಸ್ಥ ಭಕ್ತವೃಂದವು ತಾಲೂಕಿನಾದ್ಯಂತ ಸರಳವಾಗಿ ಆಚರಿಸುದರ ಮೂಲಕ ದೈವ ಕೃಪೇಗೆ ಪಾತ್ರರಾದರು.
ಭಟ್ಕಳ ತಾಲೂಕಿನಾದ್ಯಂತ ವಿವಿದೆಡೆ ಸ್ಥಾಪಿಸಲ್ಪಟ್ಟ ತಾಲೂಕಿನಾದ್ಯಂತ ಗಣಪತಿ ವಿಗ್ರಹವನ್ನು ಮೇರವಣಿಗೆಯ ಮೂಖಾಂತರ ತಂದು ಗಣೇಶನ ವಿಗ್ರಹಗಳನ್ನು ಭಕ್ತರು ಭಕ್ತಿಪರವಶರಾಗಿ ಪೂಜಿಸುವುದರ ಮೂಲಕ ತಾಲೂಕಿನಾದ್ಯಂತ ಹಬ್ಬವನ್ನು ಆಚರಿಸಿದರು.
ಮುಟ್ಟಳಿ ಮೂಡು ಭಟ್ಕಳದ ಗಣಪ ಕೆ.ಎಸ್ ಆರ್ ಟಿ ಸಿ ನೌಕರರ ಸಂಘದ ವತಿಯಿಂದ ಪೂಜಿತ ಗಣಪ, ಭಟ್ಕಳ ನ್ಯೂ ಇಂಗ್ಲೀಷ ಸ್ಕೂಲ್ ಗಣಪ. ತಲಗೋಡು ಕೋಟಿ ಮನೆ ಗಣಪ, ತಲಾಂದ ಸಾರ್ವಜನಿಕರ ಗಣಪತಿ, ಹೆಬ್ಬಳೆ ಗಾಂದಿನಗರದ ಸಾರ್ವಜನೀಕ ಗಣಪ, ಕೌವುರ್ ಸಾರ್ವಜನಿಕ ಗಣಪತಿ, ಸಬ್ಬತ್ತಿ ಜ್ವಾಳದ ಮುಲ್ಲಿ ಗಣಪ, ಮಣ್ಕುಳಿ ಸಾರ್ವಜನಿಕ ಗಣಪ.ಅಲ್ಲದೆ ಭಟ್ಕಳದ ಆಟೋಚಾಲಕ ಮಾಲಕರ ಗಣಪ, ನಿಚ್ಚಲಮಕ್ಕಿ ವೇಂಕಟರಮಣ ಗಣಪ, ಹನುಮಾನ್ ದೇವಸ್ಥಾನದ ಗಣಪ, ಪೋಲಿಸ್ ಠಾಣೇಯ ಗಣಪ, ಮುರ್ಡೆಶ್ವರ ಸಾರ್ವಜನಿಕ ಶ್ರೀ ಸಿದ್ದೀವಿನಾಯಕ ಸೇವಾ ಸಮೀತಿಯ ಗಣೇಶ, ಹೀಗೆ ತಾಲೂಕಿನಾದ್ಯಂತ ಕಳೆದ ವರ್ಷದಂತೆ ಈ ವರ್ಷವೂ ಕೂಡ ಗಣೇಶ ಚತುರ್ಥಿ ಉತ್ಸವಕ್ಕೆ ಕೊರೋನಾದ ಕರಿನೆರಳು ಬೀದಿದ್ದು, ಈ ಬಾರಿಯೂ ಸರಳವಾಗಿ ಆಚರಣೆ ಮಾಡುವ ಪರಿಸ್ಥಿತಿ ಎದುರು ರಾಗಿದ್ದುಕೇಲವು ಬಾಗದಲ್ಲಿ ಮೂರು,ನಾಲ್ಕು ದಿನ ಇರುತ್ತಿದ್ದ ಗಣಪತಿಯನ್ನು ಒಂದೇ ದಿನದಲ್ಲಿ ವಿಸರ್ಜನೆ ಮಾಡಲಾಯಿತು.
Leave a Comment