
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ದಿನಾಂಕ 14-09-2021 ರಂದು ಹಿಂದಿ ದಿವಸನ್ನು ವಿರೋಧಿಸಿ ಜಯಕರ್ನಾಟಕ ಸಂಘದ ಹಳಿಯಾಳ ತಾಲೂಕ ಘಟಕ, ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರರಾದ ಬಿ. ವಿ. ರತ್ನಾಕರ ರವರ ಮೂಲಕ ತಮ್ಮ ಮನವಿ ಪತ್ರವನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಯವರಿಗೆ ರವಾನಿಸಿದರು.ಈ ಸಂದರ್ಬದಲ್ಲಿ ತಾ ಅದ್ಯಕ್ಷರಾದ ಅಮರನಾಥ ಪಳನೀಸ್ವಾಮಿ ತಾ ಪ್ರ ಕಾರ್ಯದರ್ಶಿ ಮಹೇಶ ಹುಲಕೋಪ್ಪ, ಪರಶುರಾಮ ಶಾಹಪೂರಕರ, ಖಜಾಂಚಿ ದಯಾನಂದ ನುಚ್ಚಂಬ್ಲಿ, ಅನಿಸ ಪಿರವಾಲೆ, ಶಿರಾಜ ಮುನವಳ್ಳಿ, ನಗರ ಘಟಕ ಅದ್ಯಕ್ಷರಾದ ಮುರಗೇಶ ಬೋಸ, ಗೋಪಾಲ ಗರಗ, ಮಹಾದೇವ ಚಲವಾದಿ, ಅವಿನಾಶ ಮಿಶಾಳೆ ಮುಂತಾದವರಿದ್ದರು.
Leave a Comment