ಉತ್ತರ ಕನ್ನಡ ಜಿಲ್ಲೆ ಹಳಿಯಾಳ : ನಾನು ಮತ್ತು ನನ್ನ ಸ್ನೇಹಿತರು ಮಾರಾಠಾ ಸಮಾಜಕ್ಕಾಗಿ ನಡೆಸಿದ ಹೋರಾಟ ಯಶಸ್ವಿಯಾಗಿ ಒಂದು ಹಂತಕ್ಕೆ ಬಂದು ಮುಟ್ಟಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಳಿಯಾಳ ತಾಲೂಕಿನಲ್ಲಿ ಮರಾಠಾ ಸಮಾಜದ ಶಿವಾಜಿ ಮಹಾರಾಜರ ಹೆಸರಿನಲ್ಲಿ ವಿವಿಧ ಬೋಗಸ್ ಸಂಘಟನೆಗಳ ಹುಟ್ಟುಹಾಕಿ ಅನುದಾನ ಮಂಜೂರು ಮಾಡಿಕೊಂಡು ದುರ್ಬಳಕೆ ಮಾಡಿಕೊಂಡ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿದೆ.
ತಾಲೂಕಿನ ಎಲ್ಲ ಮರಾಠರು ಪಕ್ಷಭೇದ ಮರೆತು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಹೋರಾಟದಲ್ಲಿ ಪಾಲ್ಗೊಂಡ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಇದೇ ವಿಷಯದ ಕುರಿತು ಮಾನ್ಯ ಲೋಕಾಯುಕ್ತ ಬೆಂಗಳೂರು ಅವರಿಗೆ ಸಹ ದೂರು ನೀಡಿದ್ದು ಪ್ರಕರಣ ತನಿಖೆಗಾಗಿ ಸಂಬಂಧಿಸಿದವರಿಗೆ ನೋಟೀಸ್ ಜಾರಿಯಾಗಿದ್ದು, ಲೋಕಾಯುಕ್ತ ಕಾರ್ಯಪಾಲಕ ಇಂಜಿನಿಯರ್ ಸ್ಥಳಪರಿಶೀಲನೆಗೆ ದಿನಾಂಕ 21-9-2021 ಕ್ಕೆ ಹಳಿಯಾಳಕ್ಕೆ ಬರುತ್ತಿದ್ದಾರೆ.

ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಾನ್ಯ ಸಹಾಯಕ ಕಮಿಷನರ ಕಾರವಾರ ಅವರು ತನಿಖೆ ಕೈಗೊಂಡು ಸುದೀರ್ಘ ವರದಿ ನೀಡಿ ಬೋಗಸ ಸಂಸ್ಥೆಗಳಿಗೆ ಹಣ ಮರಳಿ ನೀಡುವಂತೆ ನೋಟೀಸ್ ಮಾಡಿದ್ದಾರೆ. ಸಂಸ್ಥೆಯವರು ಜಿಲ್ಲಾಧಿಕಾರಿಗಳಿಗೆ ತಮ್ಮ ಸಂಸ್ಥೆ ಕಟ್ಟಿದ ಕಟ್ಟಡವನ್ನು ಸಮುದಾಯ ಭವನ ಎಂದು ಪರಿಗಣಿಸಿ ಎಂದು ಬರೆದ ಪತ್ರವನ್ನು, ಸರಕಾರದ ಕಾರ್ಯದರ್ಶಿ ತಿರಸ್ಕರಿಸಿ ,ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ತಮ್ಮ ಅಧಿಕಾರ ಅವಧಿಯ 11 ವರೆ ವರ್ಷಗಳಲ್ಲಿ ಸಮಾಜಕ್ಕಾಗಿ ಏನನ್ನೂ ಮಾಡದೆ ಒಂದು ನಯಾಪೈಸೆ ನೀಡದ ಘೋಟ್ನೆಕರರವರು ತಮ್ಮ ಅನುದಾನದಲ್ಲಿ ತಮ್ಮ ಹೆಸರಿನ ಆಂಗ್ಲ ಮಾಧ್ಯಮ ಶಾಲೆಗೆ 20 ಲಕ್ಷ ಅನುದಾನ ಮತ್ತು ಬೇರೆ-ಬೇರೆ ಎಂಎಲ್ಸಿ ಗಳಿಂದ ಸುಮಾರು 8 ಲಕ್ಷ ಅನುದಾನ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ 5 ಲಕ್ಷ ಬಳಸಿಕೊಂಡಿದ್ದಾರೆ. ಈಗ ಸಮಾಜದ ಬೆಂಬಲ ತನಗಿದೆ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ.
ಮರಾಠಾ ಭವನವನ್ನು ನಿರಂತರ ಬಾಡಿಗೆಗೆ ನೀಡಿ ಮರಾಠಾ ಜನರಿಗೆ ಉಪಯೋಗಕ್ಕಿಲ್ಲದಂತೆ ಮಾಡಿದ್ದಾರೆ. ಕೇವಲ 23 ಜನರನ್ನು ಸೇರಿಸಿಕೊಂಡು ತಮ್ಮನ್ನು ತಾಲೂಕಾ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ.ನಾನು ಪ್ರಥಮ ಬಾರಿಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ನಂತರ ಆರೋಪ ಸಾಬೀತಾದರೆ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನಕ್ಕೆ ವಿದಾಯ ಹೇಳುತ್ತೇನೆ ಎಂದಿದ್ದವರು ನೈತಿಕತೆ ಇದ್ದರೆ ಆತ್ಮಸಾಕ್ಷಿ ಇದ್ದರೆ ಆ ಕೆಲಸವನ್ನು ಮಾಡಿ ತೋರಿಸಲಿ ಎಂದರು.
ಈ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಮಾರಾಠಾ ಸಮಾಜದ ಎಲ್ಲರಿಗೆ ಧನ್ಯವಾದಗಳು ಹಾಗೂ ಇನ್ನು ಮುಂದೆ ಅವರೆಲ್ಲರೂ ಪಕ್ಷ ಬೇಧ ಮರೆತು ಈ ಹೋರಾಟದಲ್ಲಿ ನಮಗೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಚೂಡಪ್ಪ ಬೋಬಾಟಿ , ರಾಕೇಶ್ ಬಾಂದೋಡ್ಕರ್, ಪ್ರದೀಪ್ ಹಿರೇಕರ, ಆನಂದ ಕಂಚನಾಲ್ಕರ, ಗುಣವಂತ ಘಾಡಿ , ಬಾಬು ತೋರಲೇಕರ, ತುಕಾರಾಂ ಪಟ್ಟೆಕರ್, ಮೋಹನ್ ಮೇವಲಂಗಿ, ಉಲ್ಲಾಸ ಬಿಡಿಕರ, ರಾಜು ಹಳ್ಳೂರಕರ್, ಚಂದು ತೋರಸ್ಕರ್, ಗಣಪತಿ ಶಿಂದೇ ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ವಾಟ್ಸಪ್ ಗ್ರೂಪ್ ಅನ್ನು ಸೇರಿ
ಗ್ರುಪ್ ಸೇರಲು ಈ ಲಿಂಕ್ ಒತ್ತಿ ;https://chat.whatsapp.com/IcbL11aRbo9C5ykufZ3VPm
Leave a Comment