ಭಟ್ಕಳ: ಪಟ್ಟಣದ ರಂಗಿನಕಟ್ಟೆಯಲ್ಲಿರುವ ಕರ್ನಾಟಕ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಬೆಂಕಿ ತಗುಲಿ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಅಗ್ನಿಶ್ಯಾಮಕ ದಳದ ಸಮಯೋಚಿತ ಪ್ರಯತ್ನದಿಂದ ಹೆಚ್ಚಿನ ಹಾನಿ ತಪ್ಪಿದೆ.
ಪಟ್ಟಣದ ರಂಗಿನಕಟ್ಟೆಯಲ್ಲಿರುವ ಕರ್ನಾಟಕ ಬ್ಯಾಂಕಿನ ಎಟಿಎಂಗೆ ಭಾನುವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಅಗ್ನಿಶ್ಯಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶ್ಯಾಮಕ ತಂಡ ಮೊದಲು ಎಟಿಎಂ ಯಂತ್ರಕ್ಕೆ ಬೆಂಕೆ ಹರಡದಂತೆ ತಡೆದು ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ.





ಯಂತ್ರಕ್ಕೆ ಹೆಚ್ಚಿನ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಅಲ್ಲಿನ ಬ್ಯಾಟರಿ ಮತ್ತು ಇನವರ್ಟರ್‌ಗೆ ಹಾನಿ ಸಂಭವಿಸಿ ಸುಟ್ಟುಹೋಗಿದೆ. ೩೦ಸಾವಿರ ರೂ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶ್ಯಾಮಕ ದಳದ ಎಚ್ಚರಿಕೆ ನಡೆಯಿಂದ ನಡೆಯುವ ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ.
Leave a Comment