ಭಟ್ಕಳ : ಕೋವಿಡ್ -19 ರಿಂದ ದ್ವೀತಿಯ ಪಿ.ಯು.ಸಿ ವಾರ್ಷಿಕ್ ಪರೀಕ್ಷೆಯನ್ನು ರದ್ದುಗೊಳಿಸಿ ಎಸ್.ಎಸ್,ಎಲ್.ಸಿ ಮತ್ತು ಪ್ರಥಮ ಪಿ.ಯು.ಸಿ ಅಂಕಗಳ ಆಧಾರದ ಮೇಲೆ ನೀಡಿದ್ದ ದ್ವಿತೀಯ ಪಿ.ಯು ಅಂಕಗಳನ್ನು ತಿರಸ್ಕರಿಸಿ, ಪುನಃ ವಾರ್ಷಿಕ ಪರೀಕ್ಷೆ ಬರೆದ ಭಟ್ಕಳದ ದಿ.ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಂಗಳಗೌರಿ ಭಟ್ಟ 42 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡುದ್ದಾಳೆ.

ಮಾರುಕೇರಿಯ ವಿಷ್ನು ಭಟ್ಟ ಮತ್ತು ಗೋಪಿಕಾ ಭಟ್ಟ ದಂಪತಿಯ ಮಗಳಾದ ಮಂಗಳಗೌರಿ ಭಟ್ಕಳ ತಾಲೀಕಿನಲ್ಲಿ ಇಲಾಖೆ ನೀಡಿದ ಅಂಕಗಳನ್ನು ತಿರಸ್ಕರಿಸಿ, ಮರು ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿನಿಯಾಗಿದ್ದು. ಮೊದಲ ಇಲಾಖೆ ನೀಡಿದ ಒಟ್ಟೂ 539 ಅಂಕಗಳ ಒದಲಾಗಿ 581 ಅಂಕಗಳೊAದಿಗೆ ಮಹಾವಿದ್ಯಾಲಯಕ್ಕೆ ಈ ಹಿಂದೆ ಪಡೆದ ತೃತೀಯ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬಡ್ತಿ ಪಡೆದು.
ಅತ್ಯುತ್ತಮ ಸಾಧನೆ ಮರೆದಿರುತ್ತಾಳೆ. ವಿದ್ಯಾರ್ಥಿಯಾದವನು ಅಲ್ಪ ತೃಪ್ತನಾಗದೇ ಸಾಧಿಸುವ ಛಲ ಹೊಂದಿದವನಾಗಿರಬೇಕು. ಎನ್ನುವುದಕ್ಕೆ ಮಂಗಳಗೌರಿ ಉತ್ತಮ ನಿದರ್ಶನವಾಗಿದ್ದಾಳೆ.
Leave a Comment