ಅಂಕೋಲಾ : ಮೀನುಗಾರಿಕೆ ನೆಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ಮುಳಗಿ ನೌಕಾನೆಲೆ ಉದ್ಯೋಗಿಯೋರ್ವ ಮೃತಪಟ್ಟ ಘಟನೆ ಭಾನುವಾರ ಬೆಲೇಕೇರಿಯಲ್ಲಿ ನಡೆದಿದೆ.
ನೌಕಾನೆಲೆ ಉದ್ಯೋಗಿಯಾಗಿರುವ ತಲೂಕಿನ ಬಾವಿಕೇರಿ ಗ್ರಾಮದ ನಿವಾಸಿ ಪುರಂದರ ಶಿವಾನಂದ ನಾಯ್ಕ ಮೃತಪಟ್ಟ ವ್ಯಕ್ತಿ.

ಈತ ಭಾನುವಾರ ರಜೆ ಇದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಬೆಲೇಕೇರಿ ತೀರದಲ್ಲಿ ಮೀನುಗಾರಿಕೆ ನಡೆಸಲು ಹೋಗಿದ್ದನು. ಸಮುದ್ರದಲ್ಲಿ ಆಕಸ್ಮಿಕವಾಗಿ ಬಿದ್ದು ಕೆಲ ಕಾಲ ಕಣ್ಮರೆಯಾದ ಈತನ್ನು ಅಂಕೋಲಾ ಪೊಲೀಸ್ ಮತ್ತು ಕರಾವಳಿ ಕಾವಲು ಪಡೆ ತಂಡ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ ಬಳಿಕ ಮೃತ ದೇಹ ಪತ್ತೆ ಹಚ್ಚಿದ್ದಾರೆ.
ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್ ಆನಂದ ಗಾಂವಕರ್, ಎಎಸ್‌ಐ ರವಿಂದ್ರ ನಾಯ್ಕ, ಸಿಬ್ಬಂದಿ ರತ್ನಾಕರ ನಾಯ್ಕ ಹುಡುಕಾಟ ನಡೆಸಿದ್ದಾರೆ. ಅಂಕೋಲಾ ಪಿಎಸ್‌ಐ ಪ್ರವೀಣಕುಮಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment