ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ದಿನಾಂಕ 30-09-2021 ರಂದು ಸಾಫ್ಟ್ ಟೆಕ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ಮತ್ತು ಜನ ಶಿಕ್ಷಣ ಸಂಸ್ಥಾನ ಕಾರವಾರ ಇವರ ಜಂಟಿ ಸಹಯೋಗದಲ್ಲಿ, 75 ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಸಂವಿಧಾನದ ಆಶಯ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಂಪ್ಯೂಟರ್ ಹಾಗೂ ಅಂಗನವಾಡಿ ಸಹಾಯಕಿ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸಂವಿಧಾನದ ಮೂಲ ತತ್ವ, ಮಹತ್ವ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ಸಂವಿಧಾನದ ಇತಿಹಾಸ ಮತ್ತು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ವಕೀಲರಾದ ಮಂಜುನಾಥ ಮಾದಾರ ಸುಲಭವಾಗಿ ಸರಳ ಭಾಷೆಯಲ್ಲಿ ತಿಳಿಸಿ ಕೊಟ್ಟರು.
ಸಂಸ್ಥೆಯ ಅಧ್ಯಕ್ಷ ಸಯ್ಯದ ಸರಫುದ್ದೀನ್ ತಂಗಳ, ರಮೇಶ ಭಂಡಾರಿ ಕೂಡ ಸಂವಿಧಾನದ ಬಗ್ಗೆ ಮತ್ತು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿ ಜೀವನದಲ್ಲಿ ಸಾಧನೆ ಮಾಡುವ ಬಗ್ಗೆ ಮಾತನಾಡಿದರು. ಮಾಜಿ ಪುರಸಭೆ ಉಪಾಧ್ಯಕ್ಷ ಹಾಲಿ ಸದಸ್ಯ ಫಯಾಜ ಶೇಖ ಸಂಸ್ಥೆಗೆ ಶುಭ ಕೋರಿದರು. ಸಂಸ್ಥೆಯ ಮುಖ್ಯಸ್ಥರಾದ ಆಯಿಷಾ ತಂಗಳ ಹಾಜರಿದ್ದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅಪರ್ಣಾ. ಹಂದ್ರಾಳ ಹಾಗೂ ಲಕ್ಷ್ಮೀ. ಲಮಾಣಿ ನಡೆಸಿಕೊಟ್ಟರು.
Leave a Comment