ಬೀಜಿಂಗ್ : ಅಣ್ವಸ್ತçಗಳನ್ನು ಹೊತ್ತೊಯ್ಯ ಬಲ್ಲ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಚೀನಾ ನಡೆಸಿದ್ದು, ಅಮೆರಿಕದ ಗುಪ್ತಚರ ಅಧಿಕಾರಿಗಳಿಗೆ ಅಚ್ಚರಿ ಉಂಟಾಗಿದೆ.
ಈ ಪರೀಕ್ಷೆ ಆಗಸ್ಟ್ ತಿಂಗಳಲ್ಲೇ ನಡೆದಿದ್ದು, ಕೆಳ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುಹಾಕಿದ್ದು, ನಿಗದಿತ ಗುರಿಗಿಂತ 32 ಕಿ.ಮೀ ದೂರದಲ್ಲಿ ಬಿದ್ದಿದೆ ಎಂದು ವರದಿ ತಿಳಿಸಿದೆ.

ಶಬ್ದ ಗಂಟೆಗೆ 1060 ಕೀ.ಮೀ ವೇಗದಲ್ಲಿ ಚಲಿಸುತ್ತದೆ. ಇದಕ್ಕಿಂತ ವೇಗದಲ್ಲಿ ಚಲಿಸವುದಕ್ಕೆ ಸೂಪರ್ ಸಾನಿಕ್ ಎನ್ನಲಾಗುತ್ತದೆ. ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುವುದನ್ನು ಹೈಪರ್ ಸಾಲಿಕ್ ಎನ್ನಲಾಗುತ್ತದೆ.
ಕೆಲವೇ ದೇಶಗಳು ಹೈಪರ್ ಸಾನಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ನಿರ್ಮಿಸಿವೆ. ಹೈಪರ್ ಸಾನಿಕ್ ಕ್ಷಿಪಣಿ ವಿಭಾಗದಲ್ಲಿ ಅಮೆರಿಕಕ್ಕಿಂತಲೂ ಚೀನಾ ಹೆಚ್ಚು ಪ್ರಗತಿ ಸಾಧಿಸಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
Leave a Comment