ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ತಹಸೀಲ್ದಾರ ಕಚೇರಿಯಲ್ಲಿ ದಿನಾಂಕ 23-10-2021 ರಂದು ವೀರ ರಾಣಿ ಕಿತ್ತೂರು ಚೆನ್ನಮ್ಮನ ಜಯಂತಿ ಯನ್ನು ಸರಳವಾಗಿ ಸುಂದರವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಪ್ರವೀಣ ಹುಚ್ಚಣ್ಣವರ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮ ಆರಂಭಿಸಿದರು.

ಕಿತ್ತೂರಿನ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸಿದ್ದಾಗ ತಾವು ಯಾವ ರೀತಿಯಲ್ಲಿ ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದರ ಬಗ್ಗೆ ವಿವರಿಸಿದರು. ಉಪನ್ಯಾಸಕರಾಗಿ ಆಗಮಿಸಿದ್ದ ರಮೇಶ್ ಪಾಟೀಲರವರು ಚೆನ್ನಮ್ಮನ ಹುಟ್ಟು, ಬಾಲ್ಯ, ನಂತರ ರಾಜ್ಯದ ಆಳ್ವಿಕೆ, ಬಿಟಿಷರನ್ನು ಎದುರಿಸಿದ್ದರ ಬಗ್ಗೆ ಮನ ಮುಟ್ಟುವಂತೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಸ್ಥ ವೆಂಕಟೇಶ ನಾಗನೂರ, ಪಶು ವೈಧ್ಯಾಧಿಕಾರಿ ನದಾಫ, ತಾಲೂಕಾ ವೈದ್ಯಾಧಿಕಾರಿ ಸಿನ್ನೂರ, ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮೇಘರಾಜ ಮೇತ್ರಿ, ವಿಲಾಸ ಮೇತ್ರಿ, ಕಿರಣ ವಡ್ಡರ, ವಕೀಲರಾದ ಮಂಜುನಾಥ ಮಾದಾರ, ಪುರಸಭೆ ಸದಸ್ಯರಾದ ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಾರಿ ಅರಶಿಣಗೇರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಾವಂತ, ಹಿರಿಯ ನಾಗರಿಕರು, ದಾನಪ್ಪ ಹುಲಸ್ವಾರ, ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.
Leave a Comment