ಭಟ್ಕಳ: ವಾಟ್ಸ್ ಆಪ್ ಗ್ರೂಪ್‌ನಲ್ಲಿ ಸಂದೇಶವೊAದನ್ನು ಹಾಕಿರುವ ಕುರಿತು ಇಬ್ಬರು ವ್ಯಕ್ತಿಗಳು ತನಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಸಿದ ವ್ಯಕ್ತಿ ತೆಂಗಿನಗುAಡಿ ಗೊಂಡರಕೇರಿಯ ಕುಪ್ಪಯ್ಯ ನಾಗಯ್ಯ ಗೊಂಡ ಎಂದು ತಿಳಿದು ಬಂದಿದ್ದು.ದೂರಿನಲ್ಲಿ ತಾನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಸೇರಿದವನಿದ್ದು ಆರೋಪಿತರಾದ ಮಾದೇವ ನಾಗಪ್ಪ ನಾಯ್ಕ, ನಾಗೇಶ ನಾರಾಯಣ ನಾಯ್ಕ ಇವರುಗಳು ತಾನು ಹೆಬಳೆಯ ಸಿದ್ಧಿವಿನಾಯಕ ದೇವಸ್ಥಾನದ ಕ್ರಾಸ್ ಬಳಿಯಲ್ಲಿರುವ ರಾಜು ನಾಯ್ಕ ಅವರ ಹೋಟೇಲ್ ಹತ್ತಿರ ನಿಂತಾಗ ಮಾದೇವ ಇವರು ವಾಟ್ಸಪ್ ಗ್ರೂಪ್‌ನಲ್ಲಿ ಹಾಕಿದ್ದ ಸಂದೇಶಕ್ಕೆ ಸಂಬAಧ ಪಟ್ಟಂತೆ ಕೇಳಿದಾಗ ತಾನು ಯಾರ ಹೆಸರನ್ನು ಹಾಕಿಲ್ಲ ಎಂದು ಸಮಜಾಯಿಷಿ ನೀಡಿದರೂ ಸಹ ಸ್ಥಳಕ್ಕೆ ನಾಗೇಶ ಅವನನ್ನು ಕರೆಯಿಸಿಕೊಂಡು ಇಬ್ಬರೂ ಸೇರಿ ತನ್ನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ನಾಗೇಶ ಈತನು ತನಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾನೆ ಎಂದೂ ತಿಳಿಸಿದ್ದಾರೆ. ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ರತ್ನಾ ಕುರಿ ಅವರು ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Leave a Comment