ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ಮರಾಠಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಬ್ಬು ಬೆಳೆಗರಾರ ಸಂಘದ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೋಬಾಟಿ ಮಾತನಾಡಿದರು.
ಕೊಯ್ಲು ಮಾಡಿ ಇಟ್ಟಿದ್ದ ಭತ್ತದ ಫಸಲು ಅಕಾಲಿಕ ಮಳೆಯ ಕಾರಣ ನೀರಿನಲ್ಲಿ ಕೊಚ್ಚಿ ಹೋಗಿ ಗದ್ದೆಗಳಲ್ಲಿ ನಿಂತ ನೀರಿನಲ್ಲಿ ಮುಳುಗಿದೆ. ಮೆಕ್ಕೆಜೋಳದ ತೆನೆಗಳನ್ನು ಬಿಡಿಸಲಾಗಿರುವ ಕಾಳುಗಳನ್ನು ಒಣಗಿಸಲು ಬಿಸಿಲು ದೊರೆಯುತ್ತಿಲ್ಲ ಇದರಿಂದ ಕಾಳುಗಳು ಮೊಳಕೆಯೊಡೆದು ಹಾಳಾಗುತ್ತಿವೆ.

ಕಬ್ಬಿನ ಗದ್ದೆಗಳಲ್ಲಿ ಅತೀ ತೇವಾಂಶದ ಕಾರಣ ಹೊಸದಾಗಿ ಬಿತ್ತನೆ ಮಾಡಿದ ಕಬ್ಬು ಮೊಳಕೆಯಾಗುವುದಿಲ್ಲ. ಒಟ್ಟಾರೆ ಅಕಾಲಿಕ ಮಳೆಯು ರೈತಸಮುದಾಯವನ್ನು ತೊಂದರೆಯಲ್ಲಿ ಸಿಲುಕಿಸಿದೆ .
ಅಕಾಲಿಕ ಅತಿವೃಷ್ಟಿಯ ಕಾರಣ ತೊಂದರೆಯಲ್ಲಿರುವ ರೈತರ ಸಹಾಯಕ್ಕೆ ಸರ್ಕಾರ, ಜನಪ್ರತಿನಿಧಿಗಳು ಧಾವಿಸಬೇಕು, ಹೆಚ್ಚು ಭತ್ತದ ಬೆಳೆ ಬೆಳೆಸುವ ರೈತರೂ ಸಹ ಹೆಚ್ಚು ಸಾಲ ಪಡೆಯಲು ತಮ್ಮ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿರುವುದಾಗಿ ಪಹಣಿಯಲ್ಲಿ ಭತ್ತದ ಬೆಳೆ ನಮೂದಿದೇ ಇರುವುದು ಕೆಲ ತಾಂತ್ರಿಕ ಕಾರಣಗಳನ್ನು ಪರಿಗಣಿಸದೇ ಭತ್ತ ಬೆಳೆ ಹಾನಿಗೊಳಗಾದ ಪ್ರತಿಯೊಂದು ರೈತರಿಗೂ ಸೂಕ್ತ ಪರಿಹಾರ ದೊರಕುವಂತಾಗಬೇಕು ಮಾತ್ರವಲ್ಲದೆ ಮಳೆಯ ಕಾರಣ ನಷ್ಟ ಅನುಭವಿಸುತ್ತಿರುವ ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗಾರರಿಗೂ ನಷ್ಟ ನೆರವು ಮಂಜೂರು ಮಾಡಬೇಕು ಎಂದು ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಆಗ್ರಹಿಸಿದರು.
ತಾಲೂಕಾಧ್ಯಕ್ಷ ಶಂಕರ ಕಾಜಗಾರ ಮಾತನಾಡಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ವಾಪಸ ಪಡೆದಿರುವದನ್ನು ಸ್ವಾಗತಿಸುವುದಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಿವು ದೇಸಾಯಿಸ್ವಾಮಿ, ದೇಮಣ್ಣ ಗೌಡಾ, ಅರುಣ ಗೊಂಧಳಿ ಇದ್ದರು.
.
Leave a Comment