ಶಿರಸಿ: ಇಲ್ಲಿನ ಸರ್ಕಾರಿ ಆಸ್ಪತ್ರೆ ಮೂತ್ರ ರೋಗ ತಜ್ಞ ಡಾ. ಗಜಾನನ ಭಟ್ಟ ಅವರು ಬರೆದ ಸ್ತ್ರೀಯರ ಲೈಂಗಿಕ ಆರೋಗ್ಯ ಸಂಶೋಧನಾ ಪ್ರಬಂದಕ್ಕೆ ವಿಶ್ವದ ಅತ್ಯುತ್ತಮ ಲೈಂಗಿಕ ಪ್ರಬಂಧ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಡಾ. ಗಜಾನನ ಭಟ್ಟ ಅವರು, ನ.19 ರಂದು ಟೋಕಿಯೋದಲ್ಲಿ ನಡೆದ ವಿಶ್ವ ಲೈಂಗಿಕ ತಜ್ಞರ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಸ್ತ್ರೀ ರೋಗ ಲೈಂಗಿಕ ಸಮಸ್ಯೆ ಹಾಗೂ ಚರ್ಮ ರೋಗ ತಜ್ಞಾರು ಸೇರಿದಂತೆ ವೈದ್ಯರ ತಂಡ ರಚಿಸಿಕೊಂಡು ಮಾಹಿತಿ ಕೆಲೆಹಾಕಲಾಗಿದೆ.
ಶಿರಸಿಯಲ್ಲಿ ಈ ಕುರಿತು ಅನೇಕ ಸಂಶೋಧನೆಗಳನ್ನು ಸಹಾ ನಡೆಸಲಾಗಿದೆ. ಈಗಾಲೇ 23 ಸಂಶೋಧನಾ ಪ್ರಂಬಧಗಳನ್ನು ರಚಿಸಲಾಗಿದೆ. ಲೈಗಿಕ ಪರಾಕಾಷ್ಟೆ ಮತ್ತು ಶೀಘ್ರ ಸ್ಕಲನ ವಿಷಯದ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಶ್ರೀಯರ ಲೈಗಿಕ ಆರೋಗ್ಯದ ಕುರಿತು ನಾವು ಕಲೆಹಾಕಿದ ಮಾಹಿತಿಗೆ ವಿಶ್ವ ಮಾನ್ಯತೆ ಸಿಕ್ಕಿರುವುದು ಸಂತೋಷದ ಸಂಗತಿ. ಪತ್ನಿ ಡಾ. ಅನುರಾಧಾ ಅವರ ಸಹಾಯ ಸಹಕಾರ ಹೆಚ್ಚಿದೆ. ಸಂಕೀರ್ಣ ವಿಷಯಗಳಲ್ಲಿ ವೈಜ್ಞಾನಿಕ ಸಲಹೆಗಳನ್ನು ಅವರಿಂದ ಪಡೆದಿದ್ದೇನೆ.
ಅಲ್ಲದೇ ಸಂಶೋಧನೆಗೆ ಸಹಾಯ ಮಾಡಿದ ಪಂಡಿತ ಸಾರ್ವಜನಿಕ ಆಸ್ಪತ್ರೆ, ಶಿರಸಿ ಟಿಎಸ್ ಎಸ್ ಆಸ್ಪತ್ರೆ ಹಾಗೋ ಹೊನ್ನಾವರ ಆಸ್ಪತ್ರೆ ಆಧಿಕಾರಿಗಳು ಹಾಗೂ ಮಾಹಿತು ನೀಡಿದ ಜನಸಾಮಾನ್ಯರನ್ನು ಸ್ಮರಿಸುವುದಾಗಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.
Leave a Comment