ಅಂಕೋಲಾ : ತಾಲೂಕಿನ ಮಾಸ್ತಿಕಟ್ಟೆ ಸಮೀಪ ರಾಷ್ಟಿçÃಯ ಹೆದ್ದಾರಿ 63ರಲ್ಲಿ ನಡೆದ ವ್ಯಾಪಾರಿಗಳ ಹಣ ದರೋಡ ಪ್ರಕರಣಕ್ಕೆ ಮಹತ್ವದ ತಿರವು ಸಿಕ್ಕಿದ್ದು, ಈ ಕೃತ್ಯಕ್ಕೆ ಅವರ ಕಾರು ಚಾಲಕನಿಂದಲೇ ಮಾಹಿತಿ ರವಾನೆಯಾಗಿತ್ತು ಎಂಬ ಸುದ್ದಿ ತಿಳಿದು ಬಂದಿದೆ.
ಅAಕೋಲಾ ಪೊಲೀಸರ ತಂಡ ಕಾರು ಚಾಲಕನನ್ನು ವಶಕ್ಕೆ ಪಡೆದು ಆತನಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಹುಬ್ಬಳ್ಳಿ ಯಲ್ಲಾಪುರ ಕಡೆ ಪೊಲೀಸರಿಂದ ವ್ಯಾಪಕ ತನಿಖೆ ಆರಂಭವಾಗಿದೆ. ಹುಬ್ಬಳ್ಳಿಯಿಂದ ಬಂದು ಕಾರವಾರ-ಅಂಕೋಲಾ ಸುತಮುತ್ತ ಎಲೆಕ್ಟಿçಕಲ್ ಸಾಮಗ್ರಿಗಳನ್ನು ಪೂರೈಸಿ ಹಣ ಸಂಗ್ರಹಿಸಿ ರಾತ್ರಿ ತೆರಳುವ ಸಂದರ್ಭದಲ್ಲಿ ಹುಬ್ಬಳ್ಳಿ ನಿವಾಸಿಗಳಾದ ವಿನೋದ ಬಾಲಚಂದ್ರ ಮತ್ತು ಕೇವಲಚಂದ್ ಎನ್ನುವರು ಮುಖ ಕೈಕಾಲುಗಳ ಮೇಲೆ ಹಲ್ಲೆ ಸುಮಾರು 6 ಲಕ್ಷ ರೂಪಾಯಿ ದೋಚಲಾಗಿತ್ತು.
ಈ ಘಟನೆಯಲ್ಲಿ ಇಬ್ಬರು ವ್ಯಾಪಾರಿಗಳು ತಲೆ ಮತ್ತು ಮೈಗೆ ತೀವ್ರತರ ಏಟು ಬಿದ್ದಿದೆ. ಆರಕ್ಷಕ ನಿರೀಕ್ಷಕ ಸಂತೋಷ ಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆದ ಸಂದರ್ಭದಲ್ಲಿ ಕಾರು ಚಾಲಕನೇ ಈ ವ್ಯಾಪಾರಿಗಳ ಚಲನವಲದ ಬಗ್ಗೆ ಮಾಹಿತಿ ನೀಡಿರುವ ಮಹತ್ವದ ಸುಳಿವು ಸಿಕ್ಕಿರುವುದು ಗೊತ್ತಾಗಿದೆ. ಈ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
Leave a Comment