ಕಾರವಾರ:ಮಲ್ಪೆ ಮೀನುಗಾರರು ಗೋವಾ ಹಾಗೂ ಉತ್ತರ ಕನ್ನಡ ಜಿಲ್ಲೆಯ 15 ನಾಟಿಕಲ್ ಒಳಗೆ ಬಂದು ಬುಲ್ ಟ್ರಾಲಿಂಗ್ ಹಾಗೂ ಲೈಟ್ ಫಿಶಿಂಗ್ ಮೀನುಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಸಾಂಪ್ರದಾಯಿ ಮೀನುಗಾರರು ರಸ್ತೆಗೆ ಬೀಳುವಂತಾಗಿದೆ. ಈ ಬಗ್ಗೆ ಸರಕಾರ ಕ್ರಮಕೈಗೊಳ್ಳದೆ ಇದ್ದರೇ ಕರ್ನಾಟಕ-ಗೋವಾ ಗಡಿ ಬಂದ್ ಉಗ್ರ ಹೋರಾಟ ಮಾಡಲಾಗುವುದು ಎಂದು ಗೋವಾದ ನ್ಯಾಷನಲ್ ಫಿಶ್ ವರ್ಕರ್ ಫೋರಂನ ಉಪಾಧ್ಯಕ್ಷ ಓಲನ್ಸಿಯೋ ಸೈಮಸ್ ಎಚ್ಚರಿಸಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಗೋಷ್ಠಿ ನಡೆಸಿದ ಅವರು ಕರ್ನಾಟಕ ರಾಜ್ಯದ ಅದರಲ್ಲೂ ವಿಶೇಷವಾಗಿ ಮಲ್ಪೆಯ ಮೀನುಗಾರರು 15 ನಾಟಿಕಲ್ ಮೈಲು ಒಳಗೆ ಬಂದು ಅನಧಿಕೃತವಾಗಿ ಬುಲ್ ಟ್ರಾಲಿಂಗ್ ಹಾಗೂ ಲೈಟ್ ಫಿಶಿಂಗ್ ಮಾಡಿ ಕಾನೂನು ಉಲ್ಲಂಘಿಸುತ್ತಿದ್ದಾರೆ. ಈ ರೀತಿಯ ಮೀನುಗಾರಿಕೆ ಈಗಾಗಲೇ ಸರಕಾರ ನಿಷೇಧ ಮಾಡಿದೆ. ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತಿರುವುದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ದೊಡ್ಡ ಹೊಡೆತವಾಗಿದ್ದು ನಾವು ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ನೀಡಲಾಗಿದ್ದು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕರ್ನಾಟಕ ಹಾಗೂ ಗೋವಾ ರಾಜ್ಯದ ಸಾಂಪ್ರದಾಯಿಕ ಮೀನುಗಾರ ಸಂಘಟನೆಗಳು ಒಂದಾಗಿದ್ದು ಸರಕಾರ ಕ್ರಮಕೈಗೊಳ್ಳದಿದ್ದರೇ ಕಾನೂನು ಕೈಗೆತ್ತಿ ಉಗ್ರ ಪ್ರತಿಭಟನೆ ಮಾಡಲಾವುದು ಎಂದರು.
ಕಾನೂನು ಬಾಹೀರವಾಗಿರುವ ಬುಲ್ ಟ್ರಾಲ್ ಹಾಗೂ ಲೈಟ್ ಫಿಶಿಂಗ್ ಬಂದ್ ಆಗಬೇಕು. ಇದರ ಬಗ್ಗೆ ಪಕ್ಕದ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಆದರೆ ಕರ್ನಾಟಕ ಹಾಗೂ ಗೋವಾದಲ್ಲಿ ಇದರನ್ನು ಪಾಲಿಸದ ಕಾರಣ, ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳದೆ ಇದ್ದರೆ ಗೋವಾ- ಕರ್ನಾಟಕ ಗಡಿಯನ್ನು ಸಂಪೂರ್ಣ ಬಂದ್ ಮಾಡಿ, ಪ್ರತಿಭಟಿಸುವುದಷ್ಟೇ ಅಲ್ಲದೆ, ಅಕ್ರಮವಾಗಿ ಮೀನುಗಾರಿಕೆಯಲ್ಲಿ ತೊಡಗಿಕೊಂಡವರ ಬೋಟುಗಳನ್ನು ಹಿಡಿದು ತಮ್ಮ ಜಟ್ಟಿಯಲ್ಲಿ ಇಡಲಾಗುವುದು ಎಂದು ಎಚ್ಚರಿಸಿದರು.
ಮೀನುಗಾರ ಮುಖಂಡ ಅಶೋಕ ಆಪಾ ಧುರಿ ಮಾತನಾಡಿ ಬುಲ್ ಟ್ರಾಲ್ ಹಾಗೂ ಲೈಟ್ ಫಿಶಿಂಗ್ ನಿಂದ ಸಾಂಪ್ರದಾಯಿಕ ನಾಡ ಮೀನುಗಾರರು ರಸ್ತೆ ಬೀಳುವಂತಾಗಿದ್ದು ಅದಕ್ಕಾಗಿ ಕರ್ನಾಟಕ ಹಾಗೂ ಗೋವಾದ ಸಾಂಪ್ರಾದಾಯಿಕ ಮೀನುಗಾರ ಬಾಂಧವರು ಈ ಒಗ್ಗಟ್ಟಾಗಿದ್ದೇವೆ. ಸರಕಾರ ಕ್ರಮಕೈಗೊಳ್ಳದೆ ಇದ್ದರೇ ನಾವು ಒಗ್ಗಟ್ಟಾಗಿ ಯಾವುದೇ ಸ್ಥಿತಿಗೆ ಹೋಗಲು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ಮೀನುಗಾರ ಮುಖಂಡ ದೇವರಾಯ ಯಶ್ವಂತ ಸೈಲ್ ಮಾತನಾಡಿ ಈ ರೀತಿಯ ಅನಧೀಕೃತ ಮೀನುಗಾರಿಕೆ ತಡೆಯಲು ಕರ್ನಾಟಕ ಸರಕಾರ ಸಂಪೂರ್ಣ ವಿಫಲವಾಗಿದೆ. ಸಾಲ ಮಾಡಿ ದೋಣಿ ಖರೀದಿಸಿ ಅದನ್ನೇ ನಂಬಿ ಬದುಕುತ್ತಿದ್ದೇವೆ. ಆದರೆ ಕೆಲವೇ ಕೆಲವು ಶ್ರೀಮಂತರಿಗೆ ಅನುಕೂಲ ಸರಕಾರ ಮುಂದಾದರೇ ನಾವು ನಮ್ಮ ಕುಟುಂಬದವರೊಂದಿಗೆ ಸೇರಿ ಉಗ್ರ ಪ್ರತಿಭಟನೆ ಮಾಡುತ್ತೇವೆ. ಈಗಾಗಲೇ ಹಲವುರಿಗೆ ಮನವಿ ನೀಡಲಾಗಿದೆ. ಮಲ್ಪೆಯವರು ಗೋವಾಕ್ಕೆ ಹಾಗೂ ಗೋವಾದ ಕೆಲವು ಮೀನುಗಾರರು ಉತ್ತರ ಕನ್ನಡದ 12 ನಾಟಿಕಲ್ ಒಳಗೆ ಬಂದು ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಾರೆ. ಕರ್ನಾಟದ ಮಾಜಾಳಿಯಿಂದ ಭಟ್ಕಳವರೆಗೆ ಮೀನುಗಾರರು ಒಂದಾಗಿದ್ದಾರೆ. ಕರ್ನಾಟಕ ಸರಕಾರ ಮಲ್ಪೆಯವರು ಗೋವಾ ಗಡಿಯ ತೀರಕ್ಕೆ ಬಂದು ಮೀನುಗಾರಿಕೆ ನಡೆಸದಂತೆ ಕ್ರಮ ಆಗಬೇಕಾಗಿದೆ. 12 ನಾಟಿಕಲ್ ಹೊರತು ಮೀನುಗಾರಿಕೆ ಮಾಡಿಸಾಂಪ್ರದಾಯಿಕ ರೀತಿಯಲ್ಲಿ ಮೀನುಗಾರಿಕೆ ನಡೆಸುವವರಿಗೆ ತೊಂದರೆ ನೀಡುತ್ತಿದ್ದಾರೆ. ಮಲ್ಪೆ ಬೋಟಿಯವರು ಕಲ್ಲು, ನೆಟ್ ಬೋಲ್ಟ್, ಕತ್ತಿಯಿಂದಲೂ ಹಲ್ಲೆ ಮಾಡಿ ಗಲಾಟೆ ಮಾಡುತ್ತಾರೆ. ಸರಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ.
ಹೀಗಾಗಿ ಭಟ್ಕಳದಿಂದ -ಪಣಜಿವರೆಗಿನ ಮೀನುಗಾರರು ಒಂದಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಸರಕಾರಕ್ಕೆ, ಜಿಲ್ಲಾಧಿಕಾರಿ, ಮೀನುಗಾರಿಕಾ ಇಲಾಖೆಗೆ ಮನವಿ ಮಾಡಲಾಗಿದೆ. ಮುಂದಿನ ದಿನದಲ್ಲಿ ಗೋವಾ-ಕರ್ನಾಟಕ ಗಡಿ ಬಂದ್ ಮಾಡಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು. 15 ದಿನದಲ್ಲಿ ಕ್ರಮ ಆಗದಿದ್ದರೆ ಗೋವಾ-ಕರ್ನಾಟಕ ಗಡಿಯಲ್ಲಿ ಹೋರಾಟ ಮಾಡಲಾಗುವುದು. ಗೋವಾ-ಕರ್ನಾಟಕ ಎರಡು ಸರಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಪತ್ರಿಕಾಗೋಷ್ಠಿಯಲ್ಲಿ ಧನ್ಯವಾದ ಶಂಕರ ತಿಳೊಜಿ, ಜಾರ್ಜ್ ಫರ್ನಾಂಡೀಸ್, ಕಾಮಿಲೊ ಸೋಜಾ, ರುದ್ರಿಕ್ ನಮ್ಸೇಕರ್, ಪ್ರಶಾಂತ ಮೇಥಾ, ಕ್ರೀಸ್ತೋದ ಡಿಸೋಜಾ, ಜೋಕಿಮ್ ಮೆಂಡಿಸ್ ಹಾಗೂ ಇನ್ನಿತರರು ಇದ್ದರು.
Leave a Comment