ಸಿದ್ದಾಪುರ : ಮದುವೆಗೆ ಉಂಟಾದ ಹಣದ ಸಮಸ್ಯೆಯನ್ನು ಅಥವಾ ಇನ್ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಕೊಂಡಿರುವ ಘಟನೆ ತಾಲೂಕಿನ ಶಿರಗಳ್ಳೆಯಲ್ಲಿ ನಡೆದಿದೆ.
ಮಹೇಶ ನಾಯ್ಕ (30) ಆತ್ಮಹತ್ಯೆ ಮಾಡಕೊಂಡ ವ್ಯಕ್ತಿಯಾಗಿದ್ದಾನೆ. ಧಾರವಾಡದ ಹೊಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದನಿಗೆ ಇತೀಚೆಗೆಮದುವೆ ನಿಶ್ಚಯ ವಾಗಿತ್ತು. ಮದುವೆಗೆ ಹಣ ಹೇಗೆ ಹೊಂದಿಸುವುದು ಎಂದು ಮನಸ್ಸಿಗೆ ಹಚ್ಚಿಕೊಂಡಿದ್ದ ಎನ್ನಲಾಗಿದೆ.
ಭಾನುವಾರ ತೋಟದ ಕೆಲಸಕ್ಕೆ ಹೋದವನು ತೋಟದಿಂದ ಮನೆಗೆ ಹೋಗುತ್ತೇನೆಂದು ಹೇಳಿ ಹೋದವನು ಮನೆಗೆ ಬಾರದೆ ಕಾಣೆಯಾಗಿದ್ದುನು. ಈತನನ್ನ ಹುಡಕುತ್ತಿರುವಾಗ ಸೋಮವಾರ ಬೆಳ್ಳಿಗೆ ಮನೆಯ ಹಿಂದಿರುವ ಬೆಟ್ಟದಲ್ಲಿ ಮರಕ್ಕೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದೆ. ಘಟನೆ ಸಂಬAಧಿಸಿದAತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
Leave a Comment