ಶಿರಸಿ : ಅಕ್ರಮವಾಗಿ ಗೋಧಿಯನ್ನು ಸಂಗ್ರಹಿಸಿ ತಾನು ವಾಸವಾದ ಮನೆಯಲ್ಲಿ ಇಟ್ಟುಕೊಂಡಿದ್ದ ಈರ್ವರು ಆರೋಪಿಗಳಿಗೆ ಇಲ್ಲಿನ ಜೆಎಂಎಫ್‌ಸಿಯ ಒಂದನೇ ಹೆಚ್ಚುವರಿ ನ್ಯಾಯಾಲಯ 20 ಸಾವಿರ ರೂಪಾಯಿಗಳ ದಂಡ ಹಾಗೂ 9 ತಿಂಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪನ್ನು ನೀಡಿದೆ.
ನಹರದ ಹನುಮಗಿರಿಯ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಸುಮಾರು 50 ಕೆಜಿಯ 42 ಚೀಲದ ಗೋಧಿಯನ್ನು ತುಂಬಿ ಸಂಗ್ರಹಿಸಿಟ್ಟಿದ್ದ ಆರೋಪಿಗಳಾದ ಚನ್ನಪ್ಪ ಬಾಗೋಜಿ ಹಾಗೂ ನಾರಾಯಣ ನಾಯ್ಕ ಎಂಬುವರು ಮೇಲೆ ಅಂದಿನ ತಹಶೀಲ್ದಾರ ಕೃಷ್ಣಮೂರ್ತಿ ಅವರು ದಾಳಿ ನಡೆಸಿ, ನಂತರ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಆಗಿನ ಪಿಎಸ್‌ಐ ಅನಂತ ಪದ್ಮನಾಭ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಜಾರ್ಜ್ಶೀಟ್ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿಗಳ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಒಂದನೇ ಹೆಚ್ಚುವರಿ ನ್ಯಾಯಾಲಯ ನ್ಯಾಯಾಧೀಶ ರಾಜು ಕೆ.ಶೇಡಬಾಡ್ಕರ್ ಅವರು ಆರೋಪಿಗಳಿಗೆ 9 ತಿಂಗಳ ಶಿಕ್ಷೆ ಹಾಗೂ 20 ಸಾವಿರ ರೂಪಾಯಿಗಳ ದಂಡವನ್ನು ವಿದಿಸಿ ತೀರ್ಪನ್ನು ನೀಡಿದ್ದಾರೆ ಸರಕಾರದ ಪರವಾಗಿ ಸಹಾಯಕ ಸರಕಾರಿ ವಕೀಲ ಸೋಪಿಯಾ ಶಹಬುದ್ದೀನ್ ಇನಾಮದಾರ ಹಾಗೂ ದೇವರಾಜ ಆರ್. ಶೇಲ್ಯಾಗೋಳ ವಾದಿಸಿದ್ದರು.
Leave a Comment