ಸಿದ್ಧಾಪುರ : ಸ್ಥಳೀಯ ಪೊಲೀಸ್ ಠಾಣೆಯ ಜೀಪ್ ಹಾಗೂ ಲಾರಿ ಡಿಕ್ಕಿಯಾದ ಪರಿಣಾಮ ಜೀಪು ಪಲ್ಟಿಯಾಗಿ ಪಿಎಸ್‌ಐ ಮಹಾಂತಪ್ಪ ಕುಮಾರ ಹಾಗೂ ಚಾಲಕ ಯಲ್ಲಪ್ಪ ಕಾಗವಾಡ ಅವರಿಗೆ ಗಾಯವಾದ ಘಟನೆ ಗುರುವಾರ ಬೆಳಗಿನ ಜಾವ ತಾಲೂಕಿನ ಸಿದ್ಧಾಪುರ ಶಿರಸಿ ರಸ್ತೆಯ ನಿಡಗೋಡ ಹತ್ತಿರ ಸಂಭವಿಸಿದೆ.

ಶಿರಸಿಯಲ್ಲಿ ನಡೆಯುತ್ತಿರುವ ಪೊಲೀಸ್ ಸೆಟ್‌ನ ದೈಹಿಕ ಸಹಿಷ್ಣು ತಾ ಪರೀಕ್ಷಗೆ ಪಿಎಸ್‌ಐ ಅವರು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದು ಜೀಪು ಪಲ್ಟಿಯಾಗಿದೆಎಂದು ಹೇಳಲಾಗಿದೆ.
ಅಪಘಾತ ಸಂಭವಿಸಿದರೂ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪಿಎಸ್‌ಐ ಮಹಾಂತಪ್ಪ ಅವರನ್ನು ಶಿವಮೊಗ್ಗದ ಸಹ್ಯಾದ್ರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಜೀಪು ಚಾಲಕ ಯಲ್ಲಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು ಅವರನ್ನು ಒಂದು ದಿನದ ನಿಗಾದಲ್ಲಿ ಇಡಲಾಗಿದೆ ಎಂದು ತಿಳೀದು ಬಂದಿದೆ.
Leave a Comment