ಹೊನ್ನಾವರ : ತಾಲೂಕಿನ ಮಾಗೋಡ ಗ್ರಾಮದ ಕುಚ್ಚೋಡಿ ಕ್ರಾಸ್ ಬಳಿ ಭಾನುವಾರ ರಾತ್ರಿ ಟೆಂಪೋವೊAದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಓರ್ವ ಯುವತಿ ಮೃತಪಟ್ಟ ಘಟನೆ ನಡೆದಿದೆ.

ಇಡಗುಂಜಿ ನಗರಬಸ್ತಿಕೇರಿ ರಸ್ತೆಯ ಮೂಲಕ ಸಂಶಿಯ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತನ್ನ ಚಾಲನಾ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತಿರುವಿಗೆ ತೆಗೆದುಕೊಂಡಿದ್ದಾನೆ. ಇದರಿಂದ ಟೆಂಪೋ ಪಲ್ಟಿಯಾಗಿದೆ.
ಟೆಂಪೋದಲ್ಲಿದ್ದ ಕಾಲೇಜು ವ್ಯಾಂಸಗ ಮಾಡುತ್ತಿದ್ದ ಪ್ರಿನ್ಸಿಟಾ ಫಾನ್ಸಿಸ್ ಮಿರಾಂಡ ಸ್ಥಳದಲ್ಲೇ ಮೃತಪಟ್ಟದ್ದಾಳೆ. ಲೋಪಿಸ್, ರೇಕಲ್ ಮೀರಾಂಡ್ ಕ್ಲೇರಾ ಮಿರಾಂಡ, ರೇಖಾ ಮಾರಿಯೋ ಮೀರಾಂಡ, ಲೆನ್ಸಿಟಾ ಮಿರಾಂಡ ಪಿಲೋಮಿನಾ ಮಿರಾಂಡ ಗಾಯಗೊಂಡಿದ್ದಾರೆ ಗಾಯಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment