ಮಂಗಳೂರು : ರಾಷ್ಟಿçÃಯ ತನಿಖಾ ದಳ (ಎನ್ಐಎ)ಸೋಮವಾರ ಬಂಧಿಸಿದ ಉಳ್ಳಲದ ಮಾಜಿ ಶಾಸಕ ಇದಿನಬ್ಬವರ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳ ಮೊಬೈಲ್ ಪೋನನ್ನು ವಶಪಡಿಸಿಕೊಂಡಿದೆ.
ಸೋಮವಾರ ವಿಚಾರಣೆ ನಡೆಸಿದ ಎನ್ಐಎ ತಂಡ, ಹೆಚ್ಚಿನ ತನಿಖೆಗಳ ಮಂಗಳವಾರ ಮಂಗಳೂರಿನಿAದ ದೆಹಲಿಗೆ ಆಕೆಯನ್ನು ಕರೆದುಕೊಂಡು ಹೋಗಿದೆ. ಐಸಿಸ್ ಉಗ್ರ ಸಂಘಟನೆ ನಂಟಿನ ಆರೋಪದಲ್ಲಿ ಐದು ತಿಂಗಳ ಹಿಂದೆ ಆಗಮಿಸಿದ ಎನ್ಐಎ ತಂಡ ಇದಿನಬ್ಬರ ಪುತ್ರ ಬಿ.ಎಂ ಭಾಷಾ ಅವರ ಮನೆಗೆ ದಾಳಿ ನಡೆಸಿತ್ತು.
ಭಾಷಾ ಅವರ ಕಿರಿಯ ಪುತ್ರ ಅಮ್ಮರ್ನ್ನು ಬಂಧಿಸಿ ದೆಹಲಿಗೆ ಕರೆದೊಯ್ದಿದ್ದರು. ಈ ವೇಳೆ ಮೊಬೈಲ್ ಪೋನ್, ಹಣ ವರ್ಗಾವಣೆ ಬಗ್ಗೆ ಬ್ಯಾಂಕ್ ಖಾತೆಯ ಪರಶೀಲನೆ ನಡೆಸಿದ್ದರು. ಆಗ ಉಗ್ರ ನಂಟಿನಲ್ಲಿ ಮರಿಯಂಳ ಪಾತ್ರ ಇರುವುದು ಕಂಡುಬAದಿತ್ತು ಆದರೆ ಮನೆಯಲ್ಲೇ ವಿಚಾರಣೆ ನಡೆಸಿದ ತಂಡ ಆಗ ಅಮ್ಮರ್ನ್ನು ಮಾತ್ರ ಕರೆದೊಯ್ದಿತ್ತು.
ಆಗ ಮರಿಯಂ ಐದು ತಿಂಗಳ ಕೂಸಿನ ತಾಯಿಯಾಗಿದ್ದಳು. ಐದು ತಿಂಗಳ ಅವಧಿಯಲ್ಲಿ ಮರಿಯಂಳ ಚಲನವಲನ ಮೇಲೆ ತೀವ್ರ ನಿಗಾ ಇರಿಸಿದ್ದ ಎನ್ಐಎ ತಂಡ ಕೊನೆಗೆ ಆಕೆಯನ್ನು ಉಗ್ರ ಸಂಘಟನೆ ನಂಟಿನ ಆರೋಪದಲ್ಲಿ ಬಂದಿಸಿದೆ.
Leave a Comment