ಕುಮಟಾ : ಹೊಟೆಲ್ ಸಿಬ್ಬಂದಿಯಿಬ್ಬರು ಕ್ಷÄಲ್ಲಕ ಕಾರಣಕ್ಕಾಗಿ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನೆಹರುನಗರ ಗ್ಯಾಸ್ ಗೋಡನ್ ಬಳಿ ನಡೆದಿದ್ದು, ಹಲ್ಲೆ ನಡೆಸಿದ ಇಬ್ಬರುಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮೂಲದ ಜಾನ್ಸಿ ನಿವಾಸಿಗಳಾದ ಮನೀಶಕುಮಾರ ದೇವೇಂದ್ರ ಸಿಂಗ್ ಮತ್ತು ಕಪಿಲ್ ದೇವೇಂದ್ರ ಸಿಂಗ್ ಬಂಧಿತ ಆರೋಪಿಗಳು. ಪಟ್ಟಣದ ಖಾಸಗಿ ಹೊಟೆಲ್ವೊಂದರ ಅಡುಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಬ್ಬರು ಕ್ಷÄಲ್ಲಕ ಕಾರಣಕ್ಕಾಗಿ ಹೊಟೆಲ್ ಮ್ಯಾನೇಜರ್ ದೀಪಕ ಶರ್ಮಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.
ಇದನ್ನು ಗಮನಿಸಿದ ಹೋಟೆಲ್‌ನ ಇತರೆ ಸಿಬ್ಬಂದಿ ಮ್ಯಾನೇಜರ್‌ನನ್ನು ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ಕೂಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡು ಕುಮಟಾ ಪೊಲೀಸರು, ಆರೋಪಿತರ ಮೊಬೈಲ್ ಲಕೇಶನ್ ಚೆಕ್ ಮಾಡಿದು, ಇವರಿಬ್ಬರು ಕಾರವಾರದಲ್ಲಿರುವುದು ತಿಳಿದುಬಂದಿದೆ. ತಕ್ಷಣ ಕಾರವಾರ ಪೊಲೀಸರ ಸಹಕಾರದಲ್ಲಿ ಅಲ್ಲಿನ ಬಸ್ ನಿಲ್ದಾಣದಲ್ಲಿದ್ದ ಆರೋಪಿತರನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.
Leave a Comment