ಕಾರವಾರ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿಯು ಬಿದಿರಿನ ಕೃಷಿ ಕಾರ್ಯಕ್ರಮದಡಿ ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿಯನ್ನು ಮಾಡಲು ಪ್ರತಿ ಎಕರೆಗೆ 18 ಸಾವಿರ ರೂ. ಗಳಂತೆ ಮೂರು ವರ್ಷಗಳ ಕಾಲಾವಧಿಗೆ ಸಹಾಯಧನ ಒದಗಿಸುವ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅರ್ಹ ಪರಿಶಿಷ್ಟ ಪಂಗಡದ ರೈತರು ಅರ್ಜಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು. (ಗ್ರೇಡ್ 1&2) ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದು ದಾಖಲೆ ಸಹಿತ ಅಂದರೆ, ಜಮೀನು ಹೊಂದಿರುವ ಕುರಿತು ಆರ್‌ಟಿಸಿ/ ಅರಣ್ಯ ಹಕ್ಕು ಅಧಿನಿಯಮದಡಿ ಹಕ್ಕುಪತ್ರ, ಆರ್‌ಡಿ ನಂಬರ್ ಹೊಂದಿರುವ ಜಾತಿ ಪ್ರಮಾಣಪತ್ರ, ಆಧಾರ್ ಪ್ರತಿಯೊಂದಿಗೆ ಅರ್ಜಿ ಭರ್ತಿ ಮಾಡಿ ಜ.18ರೊಳಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ.
ತೇಲಿರಾಮ್ ಜಿ ರಸ್ತೆ. ಶಾರದಾ ಕಟ್ಟಡ ಮೊದಲೇ ಮಹಡಿ ಕಾರವಾರ – 581 301 ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಕಾರವಾರ ಅಥವಾ ದೂರವಾಣಿ ಸಂಖ್ಯೆ : 08382 – 226 575 ಗೆ ಸಂಪರ್ಕಿಸಬಹುದಾಗಿದೆ. ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಲಕ್ಷಣ ಬಬಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment