ಶಿರಸಿ : ವಿದ್ಯತ್ ವೈರ್ ಸ್ಪರ್ಶದಿಂದ ತೀವ್ರ ಆಘಾತಕ್ಕೊಳಗಾಗಿ ವ್ಯಕ್ತಿ ಮೃತಪಟ್ಟಘಟನೆ ಇಲ್ಲಿನ ಮಾರಿಕಾಂಬಾನಗರದಲ್ಲಿ ಮಂಗಳವಾರ ಸಂಭವಿಸಿದೆ.
ಇಲ್ಲಿನ ಹಾಲಪ್ಪ ಮೂಕಪ್ಪ ಲಾವಣಿ (25) ಮನೆಯಲ್ಲಿ ಜೋತು ಬಿದ್ದಿದ್ದ ವಿದ್ಯತ್ ವೈರ್ ಸರಿಪಡಿಸುತ್ತಿದ್ದ ವೇಳೆ ಕರೆಂಟ್ ತಗುಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಬಂದ 108 ಅಂಬುಲೆನ್ಸ್ ತುರ್ತು ಚಿಕಿತ್ಸಾ ತಜ್ಞ ಪ್ರದೀಪ ಹಾಗೂ ಚಾಲಕ ನಿರಂಜನ ತುರ್ತು ಸೇವೆ ನೀಡಿದ್ದು, ಅದಕ್ಕೆ ಸ್ಪಂದಿಸದ ಹಾಲಪ್ಪ ನಿಧನರಾಗಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment