ಕುಮಟಾ : ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಜನರು ಗಾಯಗೊಂಡ ಘಟನೆ ಕುಮಟಾ ತಾಲೂಕಿನ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಸಂಭವಿಸಿದೆ.
ಕಾರ್ಕಳದ ಕೆ.ಎಸ್.ಆರ್.ಪಿ ಸಿಬ್ಬಂದಿ ವಿಶಾಲ ಹೊಸಮನಿ (28), ಉಡಪಿಯ ನಿವಾಸಿಗಳಾದ ಚನ್ನಪ್ಪ ಫಕೀರಪ್ಪ ಹಡಪದ (55), ರತ್ನಾ ಚನ್ನಪ್ಪ ಹಡಪದ (55) ಬೆಳಗಾವಿಯ ನಿವಾಸಿಗಳಾದ ಖೈರುನ್ಬಿ ಶೇಖ (44), ರಫೀಕ್ ಸಾಬ್ (46), ಬೆಳಗಾವಿಯ ರಾಮದುರ್ಗ ನಿವಾಸಿ ಮಂಜೆಗೌಡ ಪಾಟೀಲ (35), ಲಾರಿ ಕ್ಲೀನರ್ ಮಧ್ಯಪ್ರದೇಶದ ಪಾಗಾರಘಾಟನ ರಾಜು ರಘುನಾಥ (50), ಚಾಲಕ ಮಧ್ಯಪ್ರದೇಶದ ಕತಡ್ಗಾವನ ಕಮಲ ಮಾನಸಿಂಗ್ (40), ಬಸ್ ಚಾಲಕ ಶಂಕರಗೌಡ ದಿಂಡಿಗಟ್ಟಿ (33) ಗಾಯಗೊಂಡವರಾಗಿದ್ದಾರೆ.
ಆರೋಪಿತ ಬಸ್ ಚಾಲಕ ಶಂಕರಗೌಡ ದಿಂಡಿಗಟ್ಟಿ ಬಸ್ಸನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷö್ಯದಿಂದ ಚಲಾಯಿಸಿ, ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಲಾರಿಗೆ ಕುಮಟಾ ತಾಲೂಕಿನ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಡಿಕ್ಕಿಪಡಿಸಿದ್ದಾನೆ. ಅಪಘಾತದ ರಭಸಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕಳಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಪಿ.ಎಸ್.ಐ.., ನವೀನ ನಾಯ್ಕ ಹಾಗೂ ರವಿ ಗುಡ್ಡಿ ಭೇಟಿ ನೀಡಿ, ಪರಿಶೀಲನೆ, ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment