ಕೊಚ್ಚಿ : ಕೊಯಿಕ್ಕೋಡ್‌ನಲ್ಲಿ 2006 ರಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಕ್ಕೆ ಸಂಬAಧಿಸಿದAತೆ ಲಷ್ಕರ್ ಇ ತೊಯಿಬಾದ ಉಗ್ರಗಾಮಿಗಳಾದ ತಡಿವಂತೆ ವಿಡಾ ನಜೀರ್ ಹಾಗೂ ಶಫಾಸ್ ಅವರನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದೆ.
ಈ ಇಬ್ಬರು ಆರೋಪಿಗಳು 2008 ರಲ್ಲಿ ನಡೆದಿದ್ದ ಬೆಂಗಳೂರು ಸರಣಿ ಸ್ಫೋಟದ ಪ್ರಕರಣದಲ್ಲೂ ಆರೋಪಿಗಳಾಗಿದ್ದು, ಅವರ ಮೇಲೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ನಜೀರ್‌ನನ್ನು ಬಾಂಗ್ಲಾದೇಶದಿAದ ಬಂಧಿಸಿ ಕರೆತರಲಾಗಿತ್ತು.
2011 ದಲ್ಲಿ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ಯ ವಿಶೇಷ ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ಘೋಷಿಸಲ್ಪಟ್ಟಿ ಈ ಅಪರಾಧಿಗಳು ಈಗ ದೋಷಮುಕ್ತರಾಗಿರುವುದರಿಂದ ಎನ್‌ಐಎ ಮುಖಭಂಗ ಅನುಭವಿಸುವಂತಾಗಿದೆ. ಪ್ರಕರಣದಲ್ಲಿ ಮೊದಲನೇಯ ಆರೋಪಿ ನಜೀರ್ ಹಾಗೂ ನಾಲ್ಕನೇ ಆಪಾದಿತ ಶಫಾಸ್‌ಗೆ ಎನ್ ಐ ಎ ನ್ಯಾಯಾಲಯ ಅಜೀವ ಕಾರಾಗೃಹವಾಸ ಶಿಕ್ಷೆ ವಿಧಿಸಿತ್ತು.
ಇದರ ವಿರುದ್ಧ ಕೇರಳ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಇಬ್ಬರೂ ಆರೋಪಿಗಳು ಈಗ ಆರೋಪಮುಕ್ತರಾಗಿದ್ದಾರೆ. ಆರೋಪಿಗಳು ಈ ಕೃತ್ಯಕ್ಕೆ ಸಂಚು ನಡೆಸಿ ಕಾರ್ಯಗತಗೊಳಿಸಿರುವುದಕ್ಕೆ ನಂಬಲರ್ಹ ಪುರಾವೆಗಳಿಲ್ಲ ಎಂದು ಅಂತಿಮ ತೀರ್ಪಿನಲ್ಲಿ ವಿವರಿಸಲಾಗಿದೆ. ಎನ್‌ಐಎ ತನಿಖಾ ಸಂಸ್ಥೆಯ ಸ್ಫೋಟ ನಡೆದ ನಾಲ್ಕು ವರ್ಷಗಳ ನಂತರ ತನಿಖೆ ಕೈಗೊಂಡಿತ್ತು.
Leave a Comment