15 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಆರೋಪಿಗಳ ಹೆಡೆಮರಿ ಕಟ್ಟಿದ ಶಿರಸಿ ಪೊಲೀಸರು
ಶಿರಸಿ : ಇಲ್ಲಿಯು ವ್ಯಕ್ತಯೋರ್ವರಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹನಿಟ್ರಾö್ಯಪ್ ಮೂಲಕ 15 ಲಕ್ಷ ಬೇಡಿಕೆಯಿಟ್ಟು ಬ್ಲಾಕ್ ಮೇಲ್ ಮಾಡಿದ ಆರೋಪದ ಮೇರೆಗೆ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲೂಕಿನುಂಚಳ್ಳಿ ಕರೆ -ಜಡ್ಡಿಯ ಅಜಿತ್ ನಾಡಿಗ್ ಬನವಾಸಿ ರಸ್ತೆಯ ಗೊಲಗೇರಿಒಣಿಯ ಧನುಶ್ಯಕುಮಾರ ಶೆಟ್ಟಿ ಹಾಗೂ ಶಿವಮೊಗ್ಗದ ರಂಗನಾಥ ಒಡವಾಣೆ ಗೋಪಾಳದ ಪದ್ಮಜಾ ಡಿ.ಎನ್. ಬಂದಿತ ಆರೋಪಿಗಳಾಗಿದ್ದಾರೆ.
ಏನಿದು ಘಟನೆ : ಈ ಮೂವರು ಆರೋಪಿಗಳು ಸೆರಿಕೊಂಡು ವ್ಯಕ್ತಿಯೊರ್ವನಿಗೆ ಸರಕಾರಿ ಕಾಯಂ ಉಪನ್ಯಾಸಕರ ಹುದ್ದೆ ಕೊಡಿಸುವುದಾಗಿ ನಂಬಿಸಿ ಜ. 17 ರಂದು ಶಿವಮೊಗ್ಗದ ಮನೆಯೊಂದರಲ್ಲಿ ಕರೆಯಿಸಿಕೊಂಡಿದ್ದಾರೆ. ನೌಕರಿ ಆಸೆಗೆ ಮನೆಗೆ ಬಂದ ವ್ಯಕ್ತಿಗೆ ಆರೋಪಿಗಳು ಸೇರಿ ಕೊಠಡಿಯೊಳಗೆ ಕೂಡಿ ಹಾಕಿ, ಆತನನ್ನು ನಗ್ನಗೊಳಿಸಿ ಫೋಟೋ, ವಿಡಿಯೋ ಮಾಡಿಕೊಂಡಿದ್ದಾರೆ.
ಅಲ್ಲದೇ 15 ಲಕ್ಷ ರೂ ಬೇಡಿಕಿಯಿಟ್ಟು, ಕೊಡದಿದ್ದರೆ ಸಾಮಾಜಿಕ, ಜಾಲತಾಣಗಳಲ್ಲಿ ಫೊಟೊ, ವಿಡಿಯೋಗಳನ್ನು ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಯೊಡ್ಡಿದ್ದಾರೆ.
18 ರಂದುಆರೋಪಿಗಳು ವ್ಯಕ್ತಿಯ ಮನೆಗೆ ಹೋಗಿ ನಿಮ್ಮ ಮಗ ಮಹಿಳೆಯೊಂದಿಗೆ ನಗ್ನವಾಗಿರುವ ಫೊಟೊ ವಿಡಿಯೋ ನಮ್ಮ ಬಳಿಯಿದೆ. ಅದನ್ನು ಡಿಲಿಟ್ ಮಾಡಲು ಮತ್ತು ನಿಮ್ಮ ಮಗ ಜಿವಂತವಾಗಿ ಬರಬೇಕೆಂದರೆ 15 ಲಕ್ಷ ರೂ. ನೀಡಬೇಕು ಎಂದು ಸಂತ್ರಸ್ತನ ತಂದೆಯಲ್ಲಿ ಬಲವಂತವಾಗಿ ಭದ್ರತೆಗಾಗಿ ನಕಲಿ ದಾಖಲೆ ಸೃಷ್ಟಿ ಮಾಡಿ, ಸುಳ್ಳು ಕರಾರುಪತ್ರ ಬರೆಸಿಕೊಂಡು ಬ್ಯಾಂಕ್ ಚೆಕ್ ಪಡೆದರಲ್ಲದೇ, ಹಣ ನೀಡಿದ್ದರೆ ನಿಮ್ಮ ಮಗ ಮಹಿಳೆಯ ಮೇಲೆ ಬಲತ್ಕಾರ ಮಾಡಿದ ಬಗ್ಗೆ ದೂರು ದಾಖಲಿಸುತ್ತೇವೆ. ಇಲ್ಲವಾದರೆ ಕೊಲೆ ಮಾಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡ ರಚಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರ ಮೇಲೂ ಕಲಂ 386, 388, 406, 384, 342, 423, 506 ಸಹಿತೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ. ಪೆನ್ನೇಕರ ಮಾರ್ಗದರ್ಶನ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದ್ರಿನಾಥ ನೇತ್ರತ್ವದಲ್ಲಿ ನಡೆದ ಈ ಕರ್ಯಾಚೆಣೆಯಲ್ಲಿ ಡಿವೈಎಸ್ಪಿ ರವಿ ಡಿ.ನಾಯ್ಕ, ಸಿಪಿಐ ರಾಮಚಂದ್ರ ನಾಯಕ್, ಸಿಬ್ಬಂದಿ ಮಾಂತೇಶ ಬಾರಕೇರ್ ಅಶೋಕ್ ನಾಯ್ಕ, ರಾಮಯ್ಯ ಪೂಜಾರಿ, ವಿದ್ಯಾ, ಯೊಶೋದಾ ನಾಯ್ಕ ಹಾಗೂ ಪಾಂಡು ನಾಗೋಜಿ ಪಾಲ್ಗೊಂಡಿದ್ದರು.
Leave a Comment