ಶಿರಸಿ : ನಗರದ ಮಂಜು ಫೋಟೊ ಸ್ಟುಡಿಯೋ ದಲ್ಲಿ ನಡೆದಿದ್ದ ಕಳುವು ಪ್ರಕರಣ ಭೇದಿಸುವಲ್ಲಿ ಶಿರಸಿ ಪೊಲೀಸರು ಉಶ್ವಸಿಯಾಗಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಶಿವಮೊಗ್ಗದ ಬಾಳೆಕೊಪ್ಪದ ಗಿರೀಶ ಶಿವಪ್ಪ ಭಜಂತ್ರಿ (22) ಬಂಧಿತ ಆರೋಪಿ. ಈತ ಸ್ಟುಡಿಯೋದಿಂದ ಕಳವುಮಾಡಿದ್ದೆನ್ನಲಾದ ಅಂದಾಜು 70 ಸಾವಿರ ಮೌಲ್ಯದ ಕ್ಯಾಮರಾವನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಡಿಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ನಗರ ಠಾಣೆ ಪಿಎಸ್‌ಐ ರಾಜಕುಮಾರ ಉಕ್ಕಲಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದರು.
Leave a Comment