ಅಂಕೋಲಾ : ರಸ್ತೆಗೆ ಅಡ್ಡಬಂದ ಹಸುವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರ್ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮೃತಪಟ್ಟ ಘಟನೆ ಶುಕ್ರವಾರ ರಾ.ಹೆ. 66 ರಲ್ಲಿ ಅವರ್ಸಾದ ಕಾತ್ಯಾಯಿನಿ ಹೈಸ್ಕೂಲ್ ಹತ್ತಿರ ಸಂಭವಿಸಿದೆ.
ಪಟ್ಟಣದ ಅಜ್ಜಿಕಟ್ಟಾದ ನಿವಾಸಿ ನಿಜಾಮುದ್ದೀನ್ (ರಿಚ್ಚಾನ್) ಅಜಿಮುದ್ದೀನ್ ಶೇಖ್ (36) ಮೃತ ದುರ್ದೈವಿ ವಿಕಲಚೇತನ, ಈತನು ಕಾರವಾರದಲ್ಲಿ ಅಬಕಾರಿ ಇಲಾಖೆಯಿಂದ ಗುಜರಿ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗಿಳ್ಳಲು ಅಂಕೋಲಾದಿAದ ಕಾರವಾರಕ್ಕೆ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿತು.
ಗಂಭೀರ ಗಾಯಗೊಂಡಿದ್ದ ನಿಜಾಮುದ್ದಿನ್ ಶೇಖ್‌ನನ್ನು ಐಆರ್‌ಬಿ ಅಂಬ್ಯುಲೆನ್ಸ್ನಲ್ಲಿ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸುನೀಗಿದ ಎನ್ನಲಾಗಿದೆ.
ಸಹ ಪ್ರಯಾಣಿಕ ಅಶೋಕ ಜಾನು ಶ್ವೇಣಿ ಈತನಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಫಾರೂಕ್ ಪೈಯಾಜ ಶೇಖ್ ಪೊಲೀಸ್ ದೂರು ನೀಡಿದ್ದಾರೆ.
Leave a Comment