ಹಳಿಯಾಳ : ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನೋತ್ಸವ ಅಂಗವಾಗಿ ಪ್ರಾಕ್ಸಿನ್ ಟೆಕ್ ಪ್ರೈವೇಟ್ ಲಿಮಿಟೆಡನ ಕಚೇರಿಯಲ್ಲಿ ರಕ್ತದಾನ ಶಿಬಿರ ನೆರವೇರಿತು.
ಶಾಸಕ ಆರ್ ವಿ ದೇಶಪಾಂಡೆ ರವರು ದೀಪ ಬೆಳಗಿಸುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತ ದಾನ ಶ್ರೇಷ್ಠದಾನವಾಗಿದೆ ಹೀಗೇ ಎಲ್ಲರೂ ಮುಂದೆ ಬಂದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲಿ ಅದಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರುತ್ತದೆ ಎಂದರು.
ಪ್ರಾಕ್ಸಿನ್ ಕಂಪನಿಯ ಮಾಲಕ ನಾರಾಯಣ ಠೋಸೂರ , ಆಡಳಿತ ವಿಭಾಗದ ರಾಘವೇಂದ್ರ ಸಾಂಬ್ರೆಕರ ಹಾಗೂ ಸಿಬ್ಬಂದಿಗಳು ರಕ್ತದಾನ ಮಾಡಿದರು. ಧಾರವಾಡದ ರೋಟರಿ ಬ್ಲಡ್ ಬ್ಯಾಂಕ್ ದವರು 35 ಯುನಿಟ್ ರಕ್ತ ಸಂಗ್ರಹ ಮಾಡಿದರು. ಈ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಝರುದ್ದೀನ್ ಬಸರೀಕಟ್ಟಿ, ಉಪಾಧ್ಯಕ್ಷೆ ಸುವರ್ಣಾ ಮಾದರ, ಹಿರಿಯ ಸದಸ್ಯರಾದ ಶಂಕರ ಬೆಳಗಾಂವಕರ, ಫಯಾಜ ಶೇಖ ಉಪಸ್ಥಿತರಿದ್ದರು.
ವರದಿ ;ಮಂಜುನಾಥ. ಎಚ್. ಮಾದಾರ
ಹಳಿಯಾಳ
Haliyal News ; Join our whatsapp group
Leave a Comment