ಕುಮಟಾ : ತಾಲೂಕಿನ ಮೂರೂರು ಗ್ರಾಪಂ ವ್ಯಾಪ್ತಿಯ ಹಟ್ಟೀಕೇರಿಯಿಂದ ಹಟ್ಟಿಕೇರಿ ಕ್ರಾಸ್ ವರೆಗಿನ ರಸ್ತೆಗೆ ಮಾಡಿದ ಮರುಡಾಂಬರೀಕರಣ ಕಾಮಗಾರಿ ಕಳಪೆ ಗುಣಪಟ್ಟದಿಂದ ಕೂಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಹಟ್ಟಿಕೇರಿಯಿಂದ ಹಟ್ಟಿಕೇರಿ ಕ್ರಾಸ್ ವರೆಗೆ ಸುಮಾರು 1. ಕಿ.ಮೀ ರಸ್ತೆಯನ್ನು ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮರುಡಾಂಬರೀಕರಣ ಮಾಡಲಾಗಿದೆ. ಒಂದೇ ದಿನದಲ್ಲಿ ಹಾಕಲಾದ ಡಾಂಬರ್ ಕಿತ್ತು ಬರುತ್ತಿದೆ.
ಮೇಲ್ನೋಟಕ್ಕೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಸಾಬೀತಾಗುತ್ತಿದೆ. ಕಳಪೆ ಗುಣಪಟ್ಟದ ಕಾಮಗಾರಿ ನಡೆಸಿದ ಗುತ್ತೀಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಒಂದು ದಿನದ ಹಿಂದೆ ಡಾಂಬರೀಕರಣ ಮಾಡಲಾಗಿದ್ದು, ಒಂದೇ ದಿನದಲ್ಲಿ ರಸ್ತೆಯ ಗುಣಮಟ್ಟ ತಿಳಿಯುತ್ತಿದೆ. ಸರ್ಕಾರದ ಹಣ ಪೋಲು ಮಾಡಿರುವ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಅಗ್ರಹ ಹೇಳಿಬರುತ್ತಿದ್ದು, ಬಹಳ ವರ್ಷ ಬಾಳಿಕೆ ಬರುವ ಡಾಂಬರ್ ರಸ್ತೆ ಒಂದೇ ದಿನದಲ್ಲಿ ಕಿತ್ತೆದ್ದ ಬರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಮಣ್ಣನ್ನು ಸಹ ಹಾಕದ ಕಾರಣ ಬೃಹತ್ ವಾಹನಗಳು ಸಂಚಾರ ಮಾಡುವುದರಿಂದ ಡಾಂಬರ್ ಕೀಳಲು ಆರಂಭಿಸಿದೆ. ಸಂಪೂರ್ಣ ರಸ್ತೆ ಹಾಳಾಗುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Leave a Comment